ETV Bharat / bharat

ತಂದೆಯ ಶವದ ಪಕ್ಕದಲ್ಲಿ ರಾತ್ರಿಯಿಡೀ ಮಲಗಿದ್ದ ಮಗ: ಮನಕಲಕುವ ಘಟನೆಗೆ ಮಮ್ಮಲ ಮರುಗಿದ ಜನ

ಮೃತಪಟ್ಟಿರುವ ವಿಚಾರ ಗೊತ್ತಾಗದ ಮೂರು ವರ್ಷದ ಬಾಲಕನೊಬ್ಬ ರಾತ್ರಿಯಿಡೀ ತಂದೆಯ ಶವದ ಪಕ್ಕದಲ್ಲಿ ಅಳುತ್ತಾ ಮಲಗಿದ್ದನು.

Tragedy In Nizamabad: Son slept the whole night beside his father's dead body

author img

By

Published : Jul 3, 2023, 2:37 PM IST

Updated : Jul 3, 2023, 3:00 PM IST

ನಿಜಾಮಾಬಾದ್ (ತೆಲಂಗಾಣ): ಅಪಘಾತದಲ್ಲಿ ತನ್ನ ತಂದೆ ಮೃತಪಟ್ಟಿರುವುದು ಗೊತ್ತಾಗದ ಮೂರು ವರ್ಷದ ಮುಗ್ಧ ಬಾಲಕನೊಬ್ಬ ತಂದೆಯ ಶವದ ಪಕ್ಕದಲ್ಲೇ ರಾತ್ರಿಯಿಡೀ ಮಲಗಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಇಂದಲವಾಯಿ ಮಂಡಲದ ವೆಂಗಲ್ಪಾಡ್​ನಲ್ಲಿ ನಡೆದಿದೆ. ಸ್ಥಳಿಯ ಶಾಸಕ ಬಾಜಿರೆಡ್ಡಿ ಗೋವರ್ಧನ್ ಭಾನುವಾರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ಬಳಿಕವೇ ಈ ಮನಕಲಕುವ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರೊಬ್ಬರು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಹಾವೇರಿ: ವಾರದ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಸಾರಿಗೆ ನೌಕರ ಡಿಪೋದಲ್ಲೇ ಆತ್ಮಹತ್ಯೆ

ಗ್ರಾಮದ ನಿವಾಸಿ ಮಲವತ್ ರೆಡ್ಡಿ (34) ಎಂಬಾತ ತನ್ನ ಮೂರು ವರ್ಷದ ಮಗ ನಿತಿನ್​ ಜೊತೆ ಜೂನ್ 21 ರಂದು ಕಾರ್ಯ ನಿಮಿತ್ತ ಕಾಮರೆಡ್ಡಿ ಜಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಶನಿವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯತ್ತ ಹಿಂತಿರುಗುತ್ತಿದ್ದರು. ಆದರೆ, ಈ ವೇಳೆ ಸದಾಶಿವನಗರ ಮಂಡಲದ ಡಗ್ಗಿ ಎಂಬ ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44ರಲ್ಲಿ ರಸ್ತೆ ಬದಿಯಲ್ಲಿದ್ದ ಬ್ಯಾರಿಕೇಡ್​ಗೆ ಇವರ ಬೈಕ್​ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ-ಮಗ ಇಬ್ಬರೂ ರಸ್ತೆ ಬದಿ ಹಾರಿ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಬಾಲಕನ ತಂದೆ ಮಲವತ್ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನು ಅರಿಯದ ಬಾಲಕ, ತನ್ನ ತಂದೆಯನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ಸುತ್ತಲೂ ಕತ್ತಲಾಗಿದ್ದರಿಂದ ಹಾಗೂ ತಗ್ಗು ಪ್ರದೇಶ ಆಗಿದ್ದರಿಂದ ಇವರ ಬಳಿ ಯಾರೂ ತೆರಳಿರಲಿಲ್ಲ. ನನಗೆ ಹಸಿವಾಗಿದೆ, ಮನೆಗೆ ಹೋಗೋಣ ಏಳಪ್ಪ ಅಂತ ಅತ್ತು ಅತ್ತು ಸುಸ್ತಾದ ಬಳಿಕ ಬಾಲಕ ನಿತಿನ್​, ತಂದೆಯ ಶವದ ಬಳಿಯೇ ನಿದ್ರೆಗೆ ಜಾರಿದ್ದಾನೆ.

ಇದನ್ನೂ ಓದಿ: ಮಗನಿಗೆ ವಿದ್ಯುತ್​ ಶಾಕ್​, ಆಸ್ಪತ್ರೆಗೆ ಕರೆದೊಯ್ಯುವಾಗ ಭೀಕರ ಅಪಘಾತ: ತಾಯಿ-ಮಗ ಸೇರಿ 7 ಜನ ಸಾವು!

ಭಾನುವಾರ ಬೆಳಗ್ಗೆ ಸಮೀಪದ ದೇವಸ್ಥಾನಕ್ಕೆ ಬಂದಿದ್ದ ಅರ್ಚಕರೊಬ್ಬರು ಇವನನ್ನು ಗಮನಿಸಿದ್ದಾರೆ. ತಕ್ಷಣ ಅವರು ಸಂಬಂಧಪಟ್ಟ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿ ಮಗುವಿನ ತೊದಲು ಹೇಳಿಕೆ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಬಳಿಕ ತಾಯಿ ಘಟನೆಯನ್ನು ಖಚಿತಪಡಿಸಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ತಿಳಿದು ಸ್ಥಳೀಯ ಶಾಸಕ ಗೋವರ್ಧನ್ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಈ ಕುಟಂಬಕ್ಕೆ ಆರ್ಥಿಕ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಇಡೀರಾತ್ರಿ ದಟ್ಟ ಕಾಡಿನ ಮಧ್ಯೆ ಮನಗ ಗೋಳಾಟ ನೆನದು ಸ್ಥಳೀಯರು ಮಮ್ಮಲ ಮರುಗತೊಡಗಿದ್ದಾರೆ.

ಇದನ್ನೂ ಓದಿ: Peacock attack: ನವಿಲು ನನ್ನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ ಎಂದು ಅರಣ್ಯ ಇಲಾಖೆಗೆ ಮಹಿಳೆ ದೂರು.. ಚನ್ನಪಟ್ಟಣದಲ್ಲಿ ಕೇಸ್​

Last Updated : Jul 3, 2023, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.