ಸಂಗಾರೆಡ್ಡಿ (ತೆಲಂಗಾಣ): ಗೆಳೆಯನ ಹುಟ್ಟುಹಬ್ಬವನ್ನು ದೋಣಿಯಲ್ಲಿ ಆಚರಿಸುತ್ತಿದ್ದ ವೇಳೆ ಮದ್ಯಪಾನ ಸೇವಿಸಿದ್ದ ಇಬ್ಬರು ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಅಮೀನ್ಪುರ್ ಮಂಡಲ್ನಲ್ಲಿ ನಡೆದಿದೆ.
ಪವನ್ ಹಾಗೂ ನರ್ಸಿಂಗ್ ಮೃತದುರ್ದೈವಿಗಳು. ಜಿಲ್ಲೆಯ ಅಮೀನ್ ಪುರ ಮೂಲದ ಐವರು ಸ್ನೇಹಿತರು ಬರ್ತಡೇ ಸೆಲಬ್ರೇಷನ್ ಮಾಡಲು ನದಿಗೆ ತೆರಳಿದ್ದರು. ಈ ವೇಳೆ, ಅತಿಯಾಗಿ ಮದ್ಯಪಾನ ಸೇವಿಸಿದ್ದ ಇಬ್ಬರು, ನೀರಿಗೆ ಬಿದ್ದಿದ್ದಾರೆ. ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಪವನ್ ಮೃತದೇಹ ಪತ್ತೆಯಾಗಿದೆ.
ಈಜುತಜ್ಞರು ನರ್ಸಿಂಗ್ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಪುಣೆ - ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಮೂವರು ಬಲಿ