ಚಂಡೀಗಢ(ಪಂಜಾಬ್): ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರಿಗೆ ಸಂಚಾರಿ ಪೊಲೀಸರು ಚಲನ್ ಜಾರಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಲೂಧಿಯಾನ ಪಶ್ಚಿಮ ಕ್ಷೇತ್ರ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಅವರಿಗೆ ಚಲನ್ ಜಾರಿ ಮಾಡಲಾಗಿದೆ. ಗುರುಪ್ರೀತ್ ಕಳೆದ 4 ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ ರಾಜ್ಯಪಾಲರ ವಿರುದ್ಧ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಶಾಸಕ ಗುರುಪ್ರೀತ್ ಹೆಲ್ಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದ್ದರು.
ಅಲ್ಲದೇ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆ ಸಂಚಾರಿ ನಿಯಮ ಉಲ್ಲಂಘನೆಯಡಿ ಚಂಡೀಗಢ ಪೊಲೀಸರು ಶಾಸಕ ಗುರುಪ್ರೀತ್ ಅವರಿಗೆ ಚಲನ್ ಅನ್ನು ಜಾರಿ ಮಾಡಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಸರ್ಕಾರಕ್ಕೆ 2000 ಕೋಟಿ ದಂಡ ವಿಧಿಸಿದ ಎನ್ಜಿಟಿ