ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‍್ಯಾಲಿ ಆಯೋಜಿಸಿರುವ ಹಿನ್ನೆಲೆ ದೆಹಲಿಯ ಸಿಂಘು ಗಡಿಗೆ, ಟ್ರ್ಯಾಕ್ಟರ್ಗಳನ್ನು ಟ್ರಾಲಿಗಳ ಮೂಲಕ ತರಲಾಗುತ್ತಿದೆ.
ಇನ್ನು ಗಣರಾಜ್ಯೋತ್ಸವದಂದು ರೈತರ ಬೃಹತ್ ರ‍್ಯಾಲಿ ಹಿನ್ನೆಲೆ ರೈತರೊಂದಿಗೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಟ್ರ್ಯಾಕ್ಟರ್ ಮೆರವಣಿಗೆ ನಡೆಸದಂತೆ ರೈತರ ಮನವೊಲಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೆ, ಈ ಸಭೆ ಸಫಲವಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ಇತ್ತ ರೈತರು ದೆಹಲಿಯ ಬೀದಿ - ಬೀದಿಗಳಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವುದಾಗಿ ಪದೇ ಪದೆ ಹೇಳುತ್ತಿದ್ದಾರೆ.
ಇನ್ನು 26 ರಂದು ನಡೆಯಲಿರುವ ಈ ಟ್ರ್ಯಾಕ್ಟರ್ ಮೆರವಣಿಗೆ ಶಾಂತಿಯುತವಾಗಿ ನಡೆಯಲಿದೆ ಎಂದು ರೈತರು ತಿಳಿಸಿದ್ದಾರೆ.
ಇದನ್ನೂ ಓದಿ:ಹೊಸೂರಲ್ಲಿ ಮುತ್ತೂಟ್ ಫೈನಾನ್ಸ್ಗೆ ನುಗ್ಗಿ 7 ಕೋಟಿ ಚಿನ್ನ ದರೋಡೆ: ಹೈದರಾಬಾದ್ನಲ್ಲಿ 6 ಖದೀಮರ ಬಂಧನ!