ಲಾತೂರ್(ಜಾರ್ಖಂಡ್): ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದೆ. ನದಿ-ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಪ್ರದೇಶಗಳಲ್ಲಿ ಭೂಕುಸಿತದಂತಹ ಘಟನೆಗಳು ಸಂಭವಿಸಿ ಸಾವು ನೋವು ವರದಿಯಾಗಿದೆ.
ಇನ್ನೂ ಕೆಲವರು ಅನಾಹುತವನ್ನು ತಾವೇ ಮೈಮೇಲೆ ಎಳೆದುಕೊಳ್ತಿದ್ದಾರೆ. ಇದಕ್ಕೆ ಜಾರ್ಖಂಡ್ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇಲ್ಲಿ ಯುವಕನೋರ್ವ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಟ್ರ್ಯಾಕ್ಟರ್ ದಾಟಿಸುತ್ತಿದ್ದಾನೆ.
ಲಾತೂರ್ ಎಂಬಲ್ಲಿ ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಯುವಕ ಟ್ರಾಲಿಯಲ್ಲಿ ಬೈಕ್ ಹಾಗೂ ಕೆಲವರನ್ನು ಹತ್ತಿಸಿಕೊಂಡು ತುಂಬಿ ಹರಿಯುತ್ತಿರುವ ನದಿ ದಾಟಿಸುತ್ತಿದ್ದಾನೆ. ನೀರಿನ ಮಟ್ಟ ಹೆಚ್ಚಾಗಿದ್ದರೂ ಕೂಡ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದು, ಅದು ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ನೀರಿನಲ್ಲಿ ಮುಳುಗಿ ಪಲ್ಟಿಯಾಗಿದೆ. ಜೊತೆಗೆ ಟ್ರಾಲಿಯಲ್ಲಿದ್ದ ಬೈಕ್ ನದಿನೀರಿನಲ್ಲಿ ತೇಲಿಕೊಂಡು ಹೋಗಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಮೂಲಕ ಒಂದಾದ ಹೈಸ್ಕೂಲ್ ಲವರ್ಸ್: ಗಂಡನ ಕೊಲೆ ಮಾಡಿ ಸಿಕ್ಕಿಬಿದ್ದಿದ್ದು ಹೀಗೆ..
ಟ್ರಾಲಿಯಲ್ಲಿದ್ದ ಕೆಲವರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ತುಸು ದೂರ ಹೋಗುತ್ತಿದ್ದಂತೆ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಟ್ರ್ಯಾಕ್ಟರ್ ಚಾಲಕನ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತವಾಗಿದೆ.