ETV Bharat / bharat

ಅಜ್ಮೇರದಲ್ಲಿ ರಾಹುಲ್​ ಗಾಂಧಿ ಕಿಸಾನ್​ ಸಭೆ: ಟ್ರ್ಯಾಕ್ಟರ್​ಗಳಲ್ಲೇ ವೇದಿಕೆ ನಿರ್ಮಾಣ - ರಾಹುಲ್​ ಗಾಂಧಿ ಭೇಟಿಗೆ ಸಿದ್ಧತೆ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಇಂದು ರಾಜಸ್ಥಾನದ ಅಜ್ಮೇರ್ ಮತ್ತು ನಾಗೌರ್ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ರಾಹುಲ್ ಭೇಟಿ ಹಿನ್ನೆಲೆ ಈಗಾಗಲೇ ಸಕಲ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ. ರೂಪನ್​ಗಢದ ಸಂತ ನಗರಿದಾಸ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಿಸಾನ್ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ವಿಶೇಷ ಅಂದ್ರೆ ಈ ಕಿಸಾನ್ ಸಭೆಗೆ ಟ್ರ್ಯಾಕ್ಟರ್ ಟ್ರಾಲಿಯಿಂದ ವೇದಿಕೆ ನಿರ್ಮಿಸಿದ್ದು, ರೈತರು ಕೂಡ ಟ್ರ್ಯಾಕ್ಟರ್​ ಮೇಲೆ ಕುಳಿತೇ ರಾಹುಲ್​ ಗಾಂಧಿ ಭಾಷಣವನ್ನು ಕೇಳಲಿದ್ದಾರೆ.

Rahul Gandhi meeting in Rupangarh
ಅಜ್ಮೀರಕ್ಕೆ ಭೇಟಿ ನೀಡಲಿರೋ ರಾಹುಲ್​ ಗಾಂಧಿ
author img

By

Published : Feb 13, 2021, 10:20 AM IST

Updated : Feb 13, 2021, 10:28 AM IST

ಅಜ್ಮೇರ್​: ಇಂದು ರಾಹುಲ್ ಗಾಂಧಿ ಅಜ್ಮೇರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಆಯೋಜಿಸಿರುವ ಕಿಸಾನ್ ಸಭೆಗೆ ಟ್ರ್ಯಾಕ್ಟರ್ ಟ್ರಾಲಿಯಿಂದ ವೇದಿಕೆ ಮಾಡಲಾಗಿದೆ. ರೈತರು ಸಹ ಟ್ರ್ಯಾಕ್ಟರುಗಳ ಮೇಲೆ ಕುಳಿತು ರಾಹುಲ್ ಗಾಂಧಿಯ ಭಾಷಣ ಕೇಳಲಿದ್ದಾರೆ.

ರಾಹುಲ್​ ಗಾಂಧಿ ಭೇಟಿಗೆ ಸಿದ್ಧತೆ

ಕಿಸಾನ್​ ಸಭೆಗೆ ಆಗಮಿಸುವ ಮುನ್ನ ರಾಹುಲ್​ ವೀರ್​ ತೇಜಾಜಿ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಲಿದ್ದಾರೆ. ನಂತರ ಸಂತ ನಗರಿದಾಸ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಿಸಾನ್​ ಸಭೆಗೆ ರಾಹುಲ್​ ಆಗಮಿಸಲಿದ್ದು, ಈ ಹಿನ್ನೆಲೆ 4 ಟ್ರ್ಯಾಕ್ಟರ್​ಗಳ ಟ್ರ್ಯಾಲಿ ಬಳಸಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಜ್ಮೀರ್ ಉಸ್ತುವಾರಿ ಸಚಿವ ಲಾಲ್​ಚಂದ್​ ಕಟಾರಿಯಾ ಸೇರಿದಂತೆ ಇತರ ಸಚಿವರು ರಾಹುಲ್​ಗೆ ಸಾಥ್​ ನೀಡಲಿದ್ದಾರೆ.

ಇದನ್ನೂ ಓದಿ:ತಮಿಳುನಾಡು ಪಟಾಕಿ ದುರಂತ: ಮೃತರ ಸಂಖ್ಯೆ 19ಕ್ಕೆ ಏರಿಕೆ

Last Updated : Feb 13, 2021, 10:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.