ಯಾದಾದ್ರಿ(ತೆಲಂಗಾಣ): ಟ್ರ್ಯಾಕ್ಟರ್ ಚಾಲನೆ ಮಾಡ್ತಿದ್ದ ವೇಳೆ ಡ್ರೈವರ್ಗೆ ಹೃದಯಾಘಾತವಾಗಿದ್ದು ವಾಹನ ಅಪಘಾತಕ್ಕೀಡಾಗಿದೆ. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ನಲ್ಲಿದ್ದ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ.
ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಚಾಲಕನಿಗೆ ಹೃದಯಾಘಾತವಾಗಿರುವ ಕಾರಣ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಹಳ್ಳದಲ್ಲಿ ಬಿದ್ದಿದೆ. ದುರ್ಘಟನೆಯಲ್ಲಿ ಚಾಲಕ ಸೇರಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: 'ಕಾಂಗ್ರೆಸ್ ಒಂದೇ ಪಕ್ಷ, ಒಬ್ಬರೇ ಅಧ್ಯಕ್ಷರು': ಸೋನಿಯಾ ಭೇಟಿ ಬಳಿಕ ಗುಲಾಂ ನಬಿ ಆಜಾದ್ ಹೇಳಿಕೆ
ಅಪಘಾತದಿಂದಾಗಿ ಇತರೆ ಮೂವರಿಗೆ ಗಾಯವಾಗಿದೆ. ಅವರನ್ನು ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತರೆಲ್ಲರೂ ಆಂಧ್ರಪ್ರದೇಶದಿಂದ ಬಂದು ಇಟ್ಟಿಗೆ ಉದ್ಯಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.