ಹೋಶಂಗಾಬಾದ್ / ಮಧ್ಯಪ್ರದೇಶ: ಸತ್ಪುರ ಟೈಗರ್ ರಿಸರ್ವ್ ಅರಣ್ಯ ಪ್ರದೇಶದ ಚೆಕ್ ಪೋಸ್ಟ್ ಕ್ಯಾಂಪಸ್ನಲ್ಲಿ 4 ಹುಲಿಗಳು ಕಾಣಿಸಿಕೊಂಡಿವೆ.
ಹುಲಿಯೊಂದು ಸತ್ಪುರ ಟೈಗರ್ ರಿಸರ್ವ್ ಅರಣ್ಯ ಪ್ರದೇಶದ ಚೆಕ್ ಪೋಸ್ಟ್ ಕ್ಯಾಂಪಸ್ಗೆ ಬರುತ್ತಿದ್ದಂತೆ, ಅಲ್ಲಿದ್ದ ಸಿಬ್ಬಂದಿ ಕೊಠಡಿಯೊಳಗೆ ಸೇರಿಕೊಂಡಿದ್ದಾನೆ. ಬಳಿಕ ಸುಮಾರು ಅರ್ಧ ಗಂಟೆಗಳ ಕಾಲ ಅಲ್ಲೇ ಓಡಾಡಿದ್ದು, ಅರಣ್ಯ ಸಿಬ್ಬಂದಿ ಅದರ ಚಲನ ವಲನಗಳ ವಿಡಿಯೋ ತೆಗೆದಿದ್ದಾರೆ. ಈ ಘಟನೆ ಕೆಲ ಹಿಂದಿನ ದಿನದ್ದಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅದೇ ರೀತಿ, ಎರಡು ದಿನಗಳ ಹಿಂದೆ ಹೆಣ್ಣು ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ನೈಸರ್ಗಿಕ ಪ್ರೇಮಿ ಅಲಿ ರಶೀದ್ ಎಂಬುವವರು ಆ ಹುಲಿಗಳ ವಿಡಿಯೋ ಮಾಡಿದ್ದಾರೆ. ಅಕ್ಟೋಬರ್‌ನಿಂದ ಎಸ್‌ಟಿಆರ್ ಗೇಟ್‌ಗಳು ತೆರೆದಿದ್ದು, ಹುಲಿಗಳು ಕಾಣ ಸಿಗುತ್ತಿದೆ. ಅವುಗಳ ವಿಡಿಯೋ ಮಾಡಲಾಗುತ್ತಿದೆ. ಸದ್ಯ ಆ ವಿಡಿಯೋವನ್ನು ಎಸ್‌ಟಿಆರ್ ಅಧಿಕಾರಿಗಳಿಗೆ ನೀಡಿದ್ದಾರೆ.
ಸತ್ಪುರ ಟೈಗರ್ ರಿಸರ್ವ್‌ನ ಉಪನಿರ್ದೇಶಕ ಅನಿಲ್ ಶುಕ್ಲಾ ಮಾತನಾಡಿ, ಸತ್ಪುರ ಟೈಗರ್ ರಿಸರ್ವ್‌ಗೆ ಬರುವ ಪ್ರವಾಸಿಗರಿಗೆ ಖಾಪಾ ಮತ್ತು ಜಹ್ರಾ ಘಾಟ್ ಸೇರಿದಂತೆ ಕೆಲ ಪ್ರದೇಶದಲ್ಲಿ ಹುಲಿಗಳು ಕಾಣಸಿಗುತ್ತಿವೆ. ಹುಲಿಗಳು ಹೊರಠಾಣೆ ಸುತ್ತಲೂ ಸಂಚರಿಸುತ್ತಿದ್ದು, ಹೊರಠಾಣೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹುಲಿಗಳಿಗೂ ಕೂಡಾ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ಹೆಣ್ಣು ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು.