ETV Bharat / bharat

ಮನರಂಜನೆಯ ಮಹಾಪೂರ.. Ramoji Film Cityಗೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು - ರಾಮೋಜಿ ಫಿಲ್ಮ್​ ಸಿಟಿ ಮಾಹಿತಿ

ರಾಮೋಜಿ ಫಿಲ್ಮ್​ ಸಿಟಿ(Ramoji Film City)ಯಲ್ಲಿ ಶೂಟಿಂಗ್​ ಸೆಟ್​ಗಳು ಸೇರಿದಂತೆ ಫಿಲ್ಮ್ ಸಿಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಸಾವಿರಾರು ಜನರು ಆಗಮಿಸುತ್ತಿದ್ದು, ಪ್ರವಾಸಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Ramoji Film City
Ramoji Film City
author img

By

Published : Oct 18, 2021, 12:19 PM IST

ಹೈದರಾಬಾದ್: ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ ರಾಮೋಜಿ ಫಿಲ್ಮ್​ ಸಿಟಿ(Ramoji Film City)ಯಲ್ಲಿ ಪ್ರವಾಸಿಗರು ಮನರಂಜನೆಯ ಮಹಾಪೂರವನ್ನು ಸವಿಯುತ್ತಿರುವುದಲ್ಲದೇ ಅದ್ಭುತ ಜಗತ್ತಿನ ಅನುಭವವನ್ನು ಪಡೆಯುತ್ತಾ, ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆ ಫಿಲ್ಮ್​ ಸಿಟಿ (ಅ.8) ರಿಂದ ಪ್ರವಾಸಿಗರಿಗೆ ಮುಕ್ತವಾಗಿದೆ. ಶೂಟಿಂಗ್​ ಸೆಟ್​ಗಳು ಸೇರಿದಂತೆ ಫಿಲ್ಮ್ ಸಿಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಹೀಗೆ ಪ್ರವಾಸಕ್ಕೆ ಬಂದವರು ಇಲ್ಲಿನ ವಾತಾವರಣ ಮತ್ತು ಗಮನ ಸೆಳೆಯುವ ಕಾರ್ಯಕ್ರಮಗಳು, ಸ್ಥಳಗಳನ್ನು ಕಂಡು ಸಖತ್​ ಎಂಜಾಯ್ ಮಾಡುತ್ತಿದ್ದಾರೆ.

'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅನೇಕ ಪ್ರವಾಸಿಗರು, ರಾಮೋಜಿ ಫಿಲ್ಮ್​ ಸಿಟಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫಿಲ್ಮ್ ಸಿಟಿಯಲ್ಲಿರುವ ಸಿನಿ - ಮ್ಯಾಜಿಕ್, ಥಿಮ್ಯಾಟಿಕ್ ಆಕರ್ಷಣೆಗಳು, ಆಕರ್ಷಕ ಉದ್ಯಾನಗಳು, ಚಿಮ್ಮುವ ಕಾರಂಜಿಗಳು, ಮಕ್ಕಳ ಮನಸ್ಸಿಗೆ ಮುದ ನೀಡುವ ನಾನಾ ಆಟಗಳು, ಸ್ಟಂಟ್ ಲೈವ್ ಶೋ ಹೆಚ್ಚು ಗಮನ ಸೆಳೆಯುತ್ತಿವೆ. ಅದ್ಭುತ ಸಾಂಸ್ಕೃತಿಕ ಪ್ರದರ್ಶನಗಳನ್ನು ನೋಡಿ ನಾವು ಮೈಮರೆತೆವು ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ರಾಮೋಜಿ ಫಿಲ್ಮ್ ಸಿಟಿಗೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು

ಪ್ರವಾಸಿಗರಿಗೆ ಮನರಂಜನೆ ಮತ್ತು ಸಂತೋಷ ಒದಗಿಸುವುದರ ಜೊತೆಗೆ ಫಿಲ್ಮ್ ಸಿಟಿ ಆಡಳಿತ ಮಂಡಳಿ ಅವರ ಯೋಗಕ್ಷೇಮಕ್ಕೂ ಕೂಡ ಹೆಚ್ಚು ಮಹತ್ವ ನೀಡುತ್ತಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಎಲ್ಲರೂ ಪಾಲಿಸುವಂತೆ ಮನವಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.