ರಾಮನಗರ(ಉತ್ತರಾಖಂಡ್): ಪ್ರವಾಸಿಗರಿಂದ ತುಂಬಿದ್ದ ಕಾರೊಂದು ನೈನಿತಾಲ್ ರಾಮನಗರದಲ್ಲಿ ಹರಿಯುವ ಧೇಲಾ ನದಿಯಲ್ಲಿ ಕೊಚ್ಚಿ ಹೋಗಿ 9 ಜನರು ಸಾವನ್ನಪ್ಪಿದ್ದಾರೆ. ಪವಾಡವೆಂಬಂತೆ ಹೆಣ್ಣುಮಗುವೊಂದು ಬದುಕುಳಿದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರ್ಟಿಗಾ ಕಾರಿನಲ್ಲಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು.
ಮುಂಜಾನೆ 5ರ ಸುಮಾರಿಗೆ ಅಡ್ಡರಸ್ತೆಯೊಂದರ ಮೇಲೆ ನೀರು ಹರಿಯುತ್ತಿತ್ತು. ಇದನ್ನು ಲೆಕ್ಕಿಸದೆ ಚಾಲಕ ನದಿ ದಾಟಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರವಾಹ ಹೆಚ್ಚಾಗಿದ್ದು, ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಬಸ್ ಅಪಘಾತ: ಇಬ್ಬರು ಸಾವು, 48 ಮಂದಿಗೆ ಗಾಯ
ಸ್ಥಳೀಯರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹೆಣ್ಣು ಮಗುವೊಂದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾಡಳಿತ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 6 ಮೃತದೇಹಗಳನ್ನು ಹೊರತೆಗೆಗಿದೆ. ಕಾರಿನಿಂದ ಇತರ ಮೂರು ದೇಹಗಳನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.