ನವದೆಹಲಿ: ಹಠಾತ್ತನೇ ಭಾರತದಲ್ಲಿ ಕೊರೊನಾ ಸಾವು - ನೋವು ಹೆಚ್ಚಾಗಿದೆ. ಒಂದು ತಿಂಗಳ ಹಿಂದಷ್ಟೇ ದಿನವೊಂದರಲ್ಲಿ ದಾಖಲಾಗುವ ಸಾವಿನ ಸಂಖ್ಯೆ 150 ಹಾಗೂ ಸೋಂಕಿತರ ಸಂಖ್ಯೆ 20 ಸಾವಿರ ಗಡಿಯೊಳಗಿತ್ತು. ಆದರೆ, ಕಳೆದ 24 ಗಂಟೆಗಳಲ್ಲಿ 89,129 ಪ್ರಕರಣಗಳು ಪತ್ತೆಯಾಗಿದ್ದು, 714 ಮಂದಿ ವೈರಸ್ಗೆ ಬಲಿಯಾಗಿದ್ದಾರೆ.
ಪ್ರಸ್ತುತ ವಿಶ್ವದ ರಾಷ್ಟ್ರಗಳಲ್ಲಿ ದಿನವೊಂದರಲ್ಲಿ ವರದಿಯಾಗುತ್ತಿರುವ ಕೋವಿಡ್ ಕೇಸ್ಗಳ ಪೈಕಿ ಅಮೆರಿಕವನ್ನೇ ಭಾರತ ಹಿಂದಿಕ್ಕಿದೆ. ದೇಶದಲ್ಲಿ ಈಗ ಸೋಂಕಿತರ ಸಂಖ್ಯೆ 1,23,92,260 ಹಾಗೂ ಮೃತರ ಸಂಖ್ಯೆ 1,64,110ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,15,69,241 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 6,58,909 ಕೇಸ್ಗಳು ಇನ್ನೂ ಸಕ್ರಿಯವಾಗಿವೆ.
![Total number of corona cases, deaths, Vaccination in India](https://etvbharatimages.akamaized.net/etvbharat/prod-images/11260044_ysu.jpg)
ದಾಖಲೆಯ ವ್ಯಾಕ್ಸಿನೇಷನ್
ಈವರೆಗೆ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗಿತ್ತು. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಜನವರಿ 16 ರಿಂದ ಈವರೆಗೆ ಒಟ್ಟು 7,30,54,295 ಮಂದಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ.
![Total number of corona cases, deaths, Vaccination in India](https://etvbharatimages.akamaized.net/etvbharat/prod-images/11260044_dhj.png)
ಏಪ್ರಿಲ್ 2ರ ವರೆಗೆ 24,69,59,192 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,46,605 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.