ನವದೆಹಲಿ: ದೇಶದಲ್ಲಿ ಜನವರಿ 16ರಿಂದ ಈವರೆಗೆ ಒಟ್ಟು 4,84,94,594 ಕೋವಿಡ್ ಮಂದಿಗೆ ಲಸಿಕೆ ನೀಡಲಾಗಿದೆ. ಕೊರೊನಾದಿಂದ ನಿಮ್ಮನ್ನ ರಕ್ಷಿಸಿಕೊಳ್ಳಿ. ಮನಸ್ಸಿನಲ್ಲಿ ಯಾವುದೇ ಶಂಕೆಯಿಲ್ಲದೆ ನಿಮ್ಮ ಪಾಳೆ ಬಂದಾಗ ಲಸಿಕೆ ಪಡೆಯಿರಿ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
ಇನ್ನೊಂದೆಡೆ ದಿನದಿನಕ್ಕೂ ಹೊಸ ಸೋಂಕಿತರ, ಮೃತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 40,715 ಕೇಸ್ಗಳು ಪತ್ತೆಯಾಗಿದ್ದು,199 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 1,16,86,796 ಹಾಗೂ ಮೃತರ ಸಂಖ್ಯೆ 1,60,166ಕ್ಕೆ ಏರಿಕೆಯಾಗಿದೆ.
-
#LargestVaccineDrive pic.twitter.com/p5XIctX3Wj
— Ministry of Health (@MoHFW_INDIA) March 23, 2021 " class="align-text-top noRightClick twitterSection" data="
">#LargestVaccineDrive pic.twitter.com/p5XIctX3Wj
— Ministry of Health (@MoHFW_INDIA) March 23, 2021#LargestVaccineDrive pic.twitter.com/p5XIctX3Wj
— Ministry of Health (@MoHFW_INDIA) March 23, 2021
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ ತೆರೆದ ಕೋವಿಡ್ ಕೇಂದ್ರಗಳು.. ಇನ್ನೂ ಹಲವೆಡೆ ಲಾಕ್ಡೌನ್ ಅನಿವಾರ್ಯ ಎಂದ ಸಚಿವರು
ಒಟ್ಟು ಸೋಂಕಿತರ ಪೈಕಿ 1,11,81,253 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 3,45,377ಕ್ಕೆ ಹೆಚ್ಚಳವಾಗಿದೆ.
ಮಾರ್ಚ್ 22ರ ವರೆಗೆ 23,54,13,233 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,67,459 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.