ನವದೆಹಲಿ: ದೇಶಾದ್ಯಂತ 2ನೇ ಹಂತದ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದರೂ ಕೂಡ ಕೋವಿಡ್ ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಲಸಿಕೆ ಹಾಕಿಸಿಕೊಂಡಿದ್ದೇವೆಂದು ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆಯುವುದು, ಸ್ಯಾನಿಟೈಸ್ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಯಾವುದೇ ಕೊರೊನಾ ನಿಯಮಗಳನ್ನು ಪಾಲಿಸಲು ಮರೆಯದಿರಿ. ಎರಡೂ ಡೋಸ್ಗಳನ್ನು ಪಡೆಯುವವರೆಗೂ, ಪಡೆದ ಮೇಲೂ ಜಾಗರೂಕರಾಗಿರಿ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
-
#LargestVaccineDrive pic.twitter.com/ClQ7ZsgL2b
— Ministry of Health (@MoHFW_INDIA) March 21, 2021 " class="align-text-top noRightClick twitterSection" data="
">#LargestVaccineDrive pic.twitter.com/ClQ7ZsgL2b
— Ministry of Health (@MoHFW_INDIA) March 21, 2021#LargestVaccineDrive pic.twitter.com/ClQ7ZsgL2b
— Ministry of Health (@MoHFW_INDIA) March 21, 2021
ಕಳೆದ 24 ಗಂಟೆಗಳಲ್ಲಿ 43,846 ಸೋಂಕಿತರು ಪತ್ತೆಯಾಗಿದ್ದು, 197 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ 1,15,99,130 ಹಾಗೂ ಮೃತರ ಸಂಖ್ಯೆ 1,59,755ಕ್ಕೆ ಏರಿಕೆಯಾಗಿದೆ. ಜನವರಿ 16ರಿಂದ ಈವರೆಗೆ ಒಟ್ಟು 4,46,03,841ಮಂದಿಗೆ ಲಸಿಕೆ ನೀಡಲಾಗಿದೆ.
ಒಟ್ಟು ಸೋಂಕಿತರ ಪೈಕಿ 1,11,30,288 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೊಸ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಕ್ರಿಯ ಕೇಸ್ಗಳ ಸಂಖ್ಯೆ 3,09,087ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಮಾರ್ಚ್ 20ರ ವರೆಗೆ 23,35,65,119 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,33,602 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.