ನವದೆಹಲಿ: ಕೊರೊನಾ ಪ್ರಕರಣಗಳ ಸಂಖ್ಯೆ ಕೋಟಿ ಗಡಿ ದಾಟಿರುವ ಭಾರತದಲ್ಲಿ ಇತರ ವೈರಸ್ ಪೀಡಿತ ರಾಷ್ಟ್ರಗಳಿಗೆ ಹೋಲಿಸಿದರೆ ಮರಣ ಪ್ರಮಾಣ ಕಡಿಮೆಯಿದೆ. ಕೋವಿಡ್ ಪರೀಕ್ಷೆ, ಸೋಂಕಿತರನ್ನು ಮುಂಚಿತವಾಗಿ ಗುರುತಿಸುವುದು, ಸಮಯಕ್ಕೆ ಸರಿಯಾಗಿ ಅವರನ್ನು ಐಸೋಲೇಷನ್ಗೆ ಒಳಪಡಿಸುವುದು, ಆಸ್ಪತ್ರೆಗೆ ದಾಖಲಿಸುವುದು, ಉತ್ತಮ ಚಿಕಿತ್ಸೆ ನೀಡಿದ್ದರಿಂದ ಇದೀಗ ದೇಶದಲ್ಲಿ ದೈನಂದಿನ ಸಾವು 400 ಕ್ಕಿಂತ ಕಡಿಮೆಯಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
-
#IndiaFightsCorona
— Ministry of Health (@MoHFW_INDIA) December 21, 2020 " class="align-text-top noRightClick twitterSection" data="
India has one of the lowest deaths/mn population globally (105.4).
Focussed measures including targeted testing, early identification, timely isolation & prompt hospitalization & Standard Treatment Protocol have ensured that daily fatalities are under 400. pic.twitter.com/Iu51flc7he
">#IndiaFightsCorona
— Ministry of Health (@MoHFW_INDIA) December 21, 2020
India has one of the lowest deaths/mn population globally (105.4).
Focussed measures including targeted testing, early identification, timely isolation & prompt hospitalization & Standard Treatment Protocol have ensured that daily fatalities are under 400. pic.twitter.com/Iu51flc7he#IndiaFightsCorona
— Ministry of Health (@MoHFW_INDIA) December 21, 2020
India has one of the lowest deaths/mn population globally (105.4).
Focussed measures including targeted testing, early identification, timely isolation & prompt hospitalization & Standard Treatment Protocol have ensured that daily fatalities are under 400. pic.twitter.com/Iu51flc7he
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 24,337 ಸೋಂಕಿತರು ಪತ್ತೆಯಾಗಿದ್ದು, 333 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,00,55,560 ಹಾಗೂ ಮೃತರ ಸಂಖ್ಯೆ 1,45,810ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 96,06,111 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 3,03,639 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
![Total number of corona cases and deaths in India](https://etvbharatimages.akamaized.net/etvbharat/prod-images/9951038_sg.jpg)
ಡಿಸೆಂಬರ್ 1ರ ವರೆಗೆ 16,20,98,329 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,00,134 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.