ನವದೆಹಲಿ : 2019-20ನೇ ಹಣಕಾಸು ವರ್ಷದಲ್ಲಿ ಭಾರತೀಯ ಜನತಾ ಪಾರ್ಟಿ ಬಳಿ 4,847.78 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿದು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಪೈಕಿ ಎರಡನೇ ಸ್ಥಾನದಲ್ಲಿ ಬಿಎಸ್ಪಿ ಇದ್ದು, ಇದರ ಒಟ್ಟು ಆಸ್ತಿಯ ಮೌಲ್ಯ 698.33 ಕೋಟಿ ರೂ. ಆಗಿದೆ.
ಎಲ್ಲ ರಾಷ್ಟ್ರೀಯ ಪಕ್ಷಗಳ ಪೈಕಿ ಭಾರತೀಯ ಜನತಾ ಪಾರ್ಟಿ ಬಳಿ ಅತ್ಯಧಿಕ ಆಸ್ತಿ ಇದ್ದು, ಕಾಂಗ್ರೆಸ್ 588.16 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದು ತಿಳಿದು ಬಂದಿದೆ.
ಚುನಾವಣೆ ಸುಧಾರಣೆಗಳ ಅಡ್ವೊಕಸಿ ಗ್ರೂಪ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಇದನ್ನ ಬಹಿರಂಗಪಡಿಸಿದೆ. 2019-20ನೇ ಸಾಲಿನ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ ಇದಾಗಿದೆ.
2019-20ರ ಆರ್ಥಿಕ ವರ್ಷದಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಣೆ ಮಾಡಿರುವ ಒಟ್ಟು ಆಸ್ತಿ 6,988.57 ಕೋಟಿ ಮತ್ತು 2,129.38 ಕೋಟಿ ರೂ.ಆಗಿದೆ.
ಇದನ್ನೂ ಓದಿರಿ: ಗದ್ದೆ ಕೆಲಸಕ್ಕೆ ಹೋಗ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಲಾರಿ.. ಸ್ಥಳದಲ್ಲೇ ನಾಲ್ವರು ಮಹಿಳೆಯರು ಸಾವು
ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಅತಿ ಹೆಚ್ಚು ಆಸ್ತಿ 4,847.78 ಕೋಟಿ ಬಿಜೆಪಿ ಹೊಂದಿದೆ. ತದನಂತರ ಬಿಎಸ್ಪಿ 698.33 ಕೋಟಿ ರೂ. ಕಾಂಗ್ರೆಸ್ 588.16 ಕೋಟಿ ರೂ. ಹೊಂದಿರುವುದಾಗಿ ತಿಳಿದು ಬಂದಿದೆ. ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ 563.47 ಕೋಟಿ ರೂ. ಹೊಂದಿದೆ.
ಟಿಆರ್‌ಎಸ್ 301.47 ಕೋಟಿ ಮತ್ತು ಎಐಎಡಿಎಂಕೆ 267.61 ಕೋಟಿ ರೂ. ಆಸ್ತಿ ಹೊಂದಿದೆ. ಪ್ರಾದೇಶಿಕ ಪಕ್ಷಗಳು ಘೋಷಣೆ ಮಾಡಿರುವ ಒಟ್ಟು ಆಸ್ತಿಯಲ್ಲಿ 1,639.51 ಕೋಟಿಯಷ್ಟು ಫಿಕ್ಸೆಡ್ ಡಿಪಾಸಿಟ್ ಆಗಿದೆ.
ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ 434.219 ಕೋಟಿ ರೂ., ಟಿಆರ್‌ಎಸ್ 256.01 ಕೋಟಿ ರೂ., ಎಐಎಡಿಎಂಕೆ 246.90 ಕೋಟಿ ರೂ., ಡಿಎಂಕೆ 162.425 ಕೋಟಿ ರೂ., ಶಿವಸೇನೆ 148.46 ಕೋಟಿ ರೂ., ಬಿಜೆಡಿ 118.425 ಕೋಟಿ ರೂ., ಆಸ್ತಿ ಫಿಕ್ಸೆಡ್ ಡೆಪಾಸಿಟ್ ಆಸ್ತಿ ಹೊಂದಿವೆ.
ಇದೇ ಅವಧಿಯಲ್ಲಿ ಎಲ್ಲ ಪಕ್ಷಗಳು 134.93 ಕೋಟಿ ರೂ. ಸಾಲ ಹೊಂದಿದ್ದು, ಇದರಲ್ಲಿ ರಾಷ್ಟ್ರೀಯ ಪಕ್ಷಗಳಿಂದ 74.27 ಕೋಟಿ ರೂ. ಹಾಗೂ ಪ್ರಾದೇಶಿಕ ಪಕ್ಷಗಳಿಂದ 60.66 ಕೋಟಿ ರೂ. ಆಗಿದೆ.
2015-16ರಲ್ಲಿ ಭಾರತೀಯ ಜನತಾ ಪಾರ್ಟಿ ಬಳಿ 894 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಘೋಷಣೆ ಮಾಡಿಕೊಂಡಿತ್ತು. ಈ ವೇಳೆ ವಿಪಕ್ಷ ಕಾಂಗ್ರೆಸ್ 759 ಕೋಟಿ ಆಸ್ತಿ ಹೊಂದಿತ್ತು. ಬಿಎಸ್‌ಪಿ 557 ಕೋಟಿ, ಸಿಪಿಎಂ 432 ಕೋಟಿ ಆಸ್ತಿಯ ಮೂಲಕ ನಂತರದ ಸ್ಥಾನ ಪಡೆದಿದ್ದವು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ