ETV Bharat / bharat

ಮತ್ತೆ ಐವರ ಮೃತದೇಹ ಪತ್ತೆ.. ಚಮೋಲಿ ದುರಂತದಲ್ಲಿ ಪ್ರಾಣತೆತ್ತವರ ಸಂಖ್ಯೆ 67ಕ್ಕೆ ಏರಿಕೆ - ಎಸ್​ಡಿಆರ್​ಎಫ್

ಹಿಮ ಪ್ರವಾಹದಿಂದಾಗಿ ಸೃಷ್ಟಿಯಾದ ಕೃತಕ ಸರೋವರದ ಬಳಿ ಸಂವಹನ ನಡಸಲು ಕ್ವಿಕ್​ ಡಿಪ್ಲೋಯಬಲ್​​ ಆ್ಯಂಟೆನಾ (ಕ್ಯೂಡಿಎ)ವನ್ನ ಎಸ್​ಡಿಆರ್​ಎಫ್​ ಅಳವಡಿಸಿದೆ.

Total 67 bodies have been recovered so far in Chamoli
ಚಮೋಲಿ ನೀರ್ಗಲ್ಲು ದುರಂತದಲ್ಲಿ ಪ್ರಾಣತೆತ್ತವರ ಸಂಖ್ಯೆ 67ಕ್ಕೆ ಏರಿಕೆ
author img

By

Published : Feb 21, 2021, 1:02 PM IST

ಚಮೋಲಿ: ಉತ್ತರಾಖಂಡವನ್ನೇ ಬೆಚ್ಚಿ ಬೀಳಿಸಿದ್ದ ಹಿಮ ದುರಂತದಲ್ಲಿ ಬಲಿಯಾದವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ ಎಂದು ಡಿಜಿಪಿ ಅಶೋಕ್​ ಕುಮಾರ್​ ತಿಳಿಸಿದ್ದಾರೆ.

ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಹಿಮ ಸ್ಫೋಟಸಿ ಪ್ರವಾಹ ಉಂಟಾಗಿತ್ತು. ಕಳೆದ 15 ದಿನಗಳಿಂದ ತಪೋವನ ಸುರಂಗ, ರೇನಿ ಗ್ರಾಮ ಸೇರಿ ಚಮೋಲಿಯಲ್ಲಿ ಅನೇಕ ಅಡೆತಡೆಗಳ ನಡುವೆಯೂ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಲೇ ಇದ್ದು, ಇಂದು ಮತ್ತೆ ಐವರ ಮೃತದೇಹ ಪತ್ತೆಯಾಗಿವೆ.

Total 67 bodies have been recovered so far in Chamoli
ಹೊಸದಾಗಿ ಸೃಷ್ಟಿಯಾದ ಸರೋವರದ ಬಳಿ ಕ್ಯೂಡಿಎ ಅಳವಡಿಕೆ

ಹಿಮ ಪ್ರವಾಹದ ಸಮಯದಲ್ಲಿ ರಿಷಿಗಂಗಾ ನದಿಯ ಮಾರ್ಗ ಮುಚ್ಚಲ್ಪಟ್ಟಿದ್ದು, ಬೃಹತ್ ಮಟ್ಟದ ಕಲ್ಲು, ಮಣ್ಣು ರಿಷಿಗಂಗಾ ನದಿಗೆ ತಡೆಯೊಡ್ಡಿವೆ. ಇದರಿಂದಾಗಿ ಫುಟ್ಬಾಲ್​ ಮೈದಾನದ ಮೂರರಷ್ಟು ದೊಡ್ಡದಾದ ಸರೋವರವೊಂದು ನಿರ್ಮಾಣವಾಗಿದೆ. ಸಂವಹನ ನಡಸಲು ಈ ಸರೋವರದ ಬಳಿ ಕ್ವಿಕ್​ ಡಿಪ್ಲೋಯಬಲ್​​ ಆ್ಯಂಟೆನಾ (ಕ್ಯೂಡಿಎ)ವನ್ನ ಎಸ್​ಡಿಆರ್​ಎಫ್​ ಅಳವಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.