ETV Bharat / bharat

ಮೊಬೈಲ್​ ಟಾರ್ಚ್‌ಲೈಟ್​ ಬಳಸಿ ಚಿಕಿತ್ಸೆ..ವೈದ್ಯಕೀಯ ಕಾಲೇಜ್​​ನ ಐಸಿಯು ವಿಭಾಗದಲ್ಲಿ ಇದೆಂಥಾ ದುಃಸ್ಥಿತಿ! - Etv Bharat

ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಕಿನ ವ್ಯವಸ್ಥೆ ಇರದ ಕಾರಣ ವೈದ್ಯರು ಮೊಬೈಲ್​ ಟಾರ್ಚ್​ ಲೈಟ್​ ಬಳಸಿ ಚಿಕಿತ್ಸೆ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Pratapgarh Medical College pratapgarh medical college emergency ward

author img

By

Published : Jul 22, 2022, 7:22 PM IST

ಪ್ರತಾಪ್​ಗಢ(ಉತ್ತರ ಪ್ರದೇಶ): ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೋಸ್ಕರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ಮೀಸಲಿಡಲಾಗುತ್ತದೆ. ಇಷ್ಟೊಂದು ಹಣ ವ್ಯಯಿಸಿದರೂ ಅಲ್ಲಿನ ವ್ಯವಸ್ಥೆ ಮಾತ್ರ ಹೇಳ ತೀರದ್ದಾಗಿರುತ್ತದೆ. ಸದ್ಯ ಉತ್ತರ ಪ್ರದೇಶದ ಪ್ರತಾಪ್​​ಗಢ ಆಸ್ಪತ್ರೆಯಲ್ಲಿ ನಡೆದಿರುವ ಘಟನೆವೊಂದು ಅದಕ್ಕೆ ಹಿಡಿದಿರುವ ಕೈಗನ್ನಡಿಯಂತಿದೆ.

ವೈದ್ಯಕೀಯ ಕಾಲೇಜ್​​ನ ಐಸಿಯು ವಿಭಾಗದಲ್ಲಿ ಇದೆಂಥಾ ದುಸ್ಥಿತಿ

ಪ್ರತಾಪಗಢ ವೈದ್ಯಕೀಯ ಕಾಲೇಜ್​ನ ತುರ್ತು ಚಿಕಿತ್ಸಾ ವಿಭಾಗದಲ್ಲಿ ಈ ನಿರ್ಲಕ್ಷ್ಯ ಕಂಡು ಬಂದಿದೆ. ಮೊಬೈಲ್​ ಟಾರ್ಚ್​ ಬೆಳಕಿನಲ್ಲಿ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದಿನದ 24 ಗಂಟೆಗಳ ಕಾಲ ವಿದ್ಯುತ್​ ನೀಡುವುದಾಗಿ ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ನಡೆ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಗುರುವಾರ ರಾತ್ರಿ ಪ್ರತಾಪ್​ಗಢ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಮೊಬೈಲ್​ ಟಾರ್ಚ್​​ನ ಬೆಳಕಿನಲ್ಲಿ ಈ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸಿಬ್ಬಂದಿ ಚುಚ್ಚುಮದ್ದು ನೀಡುತ್ತಿರುವುದು, ಮುಲಾಮು, ಬ್ಯಾಂಡೇಜ್​ ಸೇರಿದಂತೆ ಎಲ್ಲ ಚಿಕಿತ್ಸೆ ಮೊಬೈಲ್ ಟಾರ್ಚ್​ ಲೈಟ್​​ ಬಳಸಿ ನೀಡಿದ್ದಾರೆ. ಉಳಿದಂತೆ ಸಾಮಾನ್ಯ ವಾರ್ಡ್​​ಗಳಲ್ಲಿ ರೋಗಿಗಳು ಕತ್ತಲೆಯಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಬಗ್ಗೆ ಈಟಿವಿ ಭಾರತ ವರದಿ ಮಾಡಲು ತೆರಳಿದಾಗ ಆಸ್ಪತ್ರೆ ವೈದ್ಯಾಧಿಕಾರಿ ಮೊಬೈಲ್​ ಕಸಿದುಕೊಳ್ಳಲು ಮುಂದಾದ ಘಟನೆ ನಡೆದಿದೆ.

ಇದನ್ನೂ ಓದಿರಿ: ಮೊಬೈಲ್​ ಟಾರ್ಚ್‌ಲೈಟ್​ ಬಳಸಿ ಆಪರೇಷನ್​... ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಸ್ಥಿತಿ!?

ಕಳೆದ ತಿಂಗಳ ಮಧ್ಯಪ್ರದೇಶದ ಛತರ್ಪುರ್​​ ಆಸ್ಪತ್ರೆಯಲ್ಲೂ ಇಂತಹದೊಂದು ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯೋರ್ವಳಿಗೆ ವೈದ್ಯರು ಹಾಗೂ ನರ್ಸ್​ಗಳು ಮೊಬೈಲ್​ ಟಾರ್ಚ್​​ ಲೈಟ್ ಬಳಸಿ ಆಪರೇಷನ್​ ಮಾಡಿರುವ ಘಟನೆ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.