ETV Bharat / bharat

ಟಾಲಿವುಡ್​ ನಟ ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ: ಆಸ್ಪತ್ರೆಗೆ ನಟರ ದಂಡು - versatile actor Prakash Raj

ಟಾಲಿವುಡ್​​​ ನಟ ಸಾಯಿ ಧರಂತೇಜ್ ಅವರ ಆರೋಗ್ಯ ವಿಚಾರಿಸಲು ಹೈದರಾಬಾದ್​ನ ಅಪೋಲೋ ಆಸ್ಪತ್ರೆಗೆ ನಟರಾದ ರಾಮ್​ಚರಣ್, ಪ್ರಕಾಶ್​ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.

Tollywood actor Sai DharamTej is now stable
ಟಾಲಿವುಡ್​ ನಟ ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ: ಆಸ್ಪತ್ರೆಗೆ ನಟರ ಭೇಟಿ
author img

By

Published : Sep 11, 2021, 11:56 AM IST

ಹೈದರಾಬಾದ್​, ತೆಲಂಗಾಣ: ಟಾಲಿವುಡ್​​​ ನಟ ಸಾಯಿ ಧರಂತೇಜ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​​ನ ಅಪೋಲೋ ಆಸ್ಪತ್ರೆ ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಿದೆ. ಸಾಯಿ ಧರಂ ತೇಜ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಎಲ್ಲ ಅಂಗಾಂಗಗಳೂ ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಬುಲೆಟಿನ್​ನಲ್ಲಿ ಉಲ್ಲೇಖಿಸಲಾಗಿದೆ.

ಟಾಲಿವುಡ್​ ನಟ ಸಾಯಿ ಧರಂತೇಜ್ ಅಪಘಾತ

ಸದ್ಯಕ್ಕೆ ಸಾಯಿ ಧರಂತೇಜ್​ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿನಪೂರ್ತಿ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಮುಂದಿನ ಆರೋಗ್ಯ ಬುಲೆಟಿನ್ ನಾಳೆ ಬಿಡುಗಡೆಯಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Tollywood actor Sai DharamTej is now stable
ಸಾಯಿ ಧರಂತೇಜ್ ಆರೋಗ್ಯ ಬುಲೆಟಿನ್ ಬಿಡುಗಡೆ

ಇನ್ನು ಅಪೋಲೋ ಆಸ್ಪತ್ರೆಗೆ ನಟ ರಾಮ್​ಚರಣ್ ಮತ್ತು ರಾಮ್​ಚರಣ್ ಪತ್ನಿ ಉಪಾಸನಾ ಭೇಟಿ ಕೊಟ್ಟು ತೇಜ್ ಆರೋಗ್ಯದ ಕುರಿತು ವೈದ್ಯರ ಬಳಿ ವಿಚಾರಿಸಿದ್ದಾರೆ. ಇದರ ಜೊತೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಟಾಲಿವುಡ್ ನಟ ಶ್ರೀಕಾಂತ್ ಆಸ್ಪತ್ರೆಗೆ ಭೇಟಿ, ತೇಜ್ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಬೈಕ್‌ ನಲ್ಲಿ ತೆರಳುತ್ತಿದ್ದಾಗ ಭೀಕರ ಅಪಘಾತ: ಟಾಲಿವುಡ್‌ ನಟ ಸಾಯಿ ಧರಂ ತೇಜ್‌ ಆರೋಗ್ಯ ಸ್ಥಿರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.