ETV Bharat / bharat

Tokyo Paralympics: ಭಾರತೀಯ ಸ್ಪರ್ಧಿಗಳಿಗೆ ಶುಭ ಕೋರಿದ ಕೊಹ್ಲಿ, ರಾಣಿ ರಾಂಪಾಲ್ - Rani rampal sends best wishes

ಭಾರತದಿಂದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ.

Tokyo Paralympics: Kohli sends best wishes to Indian contingent
Tokyo Paralympics: ಭಾರತೀಯ ಆಟಗಾರರಿಗೆ ಶುಭಕೋರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
author img

By

Published : Aug 24, 2021, 8:37 AM IST

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ ಇಂದು ಸಂಜೆ ಚಾಲನೆ ಸಿಗಲಿದೆ.(ಭಾರತೀಯ ಕಾಲಮಾನ) ಈ ಸಂದರ್ಭದಲ್ಲಿ ಭಾರತೀಯ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮುಂತಾದವರು ಸ್ಪರ್ಧಿಗಲಿಗೆ ಶುಭ ಕೋರಿದ್ದಾರೆ. ಟ್ವೀಟ್ ಮಾಡಿರುವ ಕೊಹ್ಲಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಶುಭಕೋರುತ್ತೇನೆ. ನೀವು ದೇಶಕ್ಕೆ ಹೆಮ್ಮೆ ತರುತ್ತೀರಿ ಎಂಬ ಖಾತ್ರಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • Sending my best wishes and support to the 🇮🇳 contingent at the Tokyo Paralympics. I am cheering for each one of you and I am sure you will make us proud. #TeamIndia #Praise4Para #Tokyo2020

    — Virat Kohli (@imVkohli) August 23, 2021 " class="align-text-top noRightClick twitterSection" data=" ">

ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಟ್ವೀಟ್ ಮಾಡಿ, ಈ ಪ್ರತಿಷ್ಟಿತ ಕ್ರೀಡಾಕೂಟ ಪ್ಯಾರಾಲಿಂಪಿಕ್ ಆರಂಭವಾಗುತ್ತಿದೆ. ರಾಷ್ಟ್ರವನ್ನು ಪ್ರತಿನಿಧಿಸಲು ತಯಾರಾಗುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವಿಗೆ ನಾನು ಭಾರತೀಯ ಹಾಕಿ ತಂಡದ ಪರವಾಗಿ ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಜೊತೆಗೆ ಪ್ಯಾರಾಲಿಂಪಿಕ್​ ಕ್ರೀಡಾಪಟುಗಳು ನಿಜಜೀವನದ ಹೀರೋಗಳಿಗಿಂತ ಕಡಿಮೆಯಿಲ್ಲ. ಅವರು ನಮ್ಮ ದೇಶದ ಜನರನ್ನು ಪ್ರೇರೇಪಿಸುವ ಮತ್ತು ಸ್ಫೂರ್ತಿ ನೀಡುವ ಶಕ್ತಿ ಹೊಂದಿದ್ದಾರೆ. ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯಿದೆ. ದೇಶದ ಎಲ್ಲರ ಹಾರೈಕೆ ಪ್ಯಾರಾಲಿಂಪಿಕ್ಸ್ ಪಟುಗಳಿಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ಭಾರತದಿಂದ 54 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, 9 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಪ್ಯಾರಾ ಅಥ್ಲೀಟ್​ಗಳು ನಿಜ ಜೀವನದ ಹೀರೋಗಳು, ದಯವಿಟ್ಟು ಬೆಂಬಲಿಸಿ: ತೆಂಡೂಲ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.