ಹೈದರಾಬಾದ್: ಭಾರತದ ಭರವಸೆಯ ಜಾವಲಿನ್ ಪಟು ನೀರಜ್ ಚೋಪ್ರಾ, ಟೋಕಿಯೋ ಒಲಿಂಪಿಕ್ಸ್‌ಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಭರವಸೆ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಈ ವರ್ಷ ಮಾರ್ಚ್ 5 ರಂದು, ನೀರಜ್ ಚೋಪ್ರಾ ಜಾವೆಲಿನ್ ಅನ್ನು 88.07 ಮೀಟರ್ ದೂರದಲ್ಲಿ ಎಸೆದಾಗ, ಅವರು ಭಾರತೀಯ ಕ್ರೀಡಾಪಟುವಾಗಿ ಭರವಸೆ ಮೂಡಿಸಿದ್ರು. ಕಳೆದ ಮಾರ್ಚ್‌ನಲ್ಲಿ ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರಿಕ್ಸ್ ಕೂಟದಲ್ಲಿ 88.07 ಮೀಟರ್ ದೂರ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ನೀರಜ್ ಚೋಪ್ರಾ ಎಂಬ ಹರಿಯಾಣದ ಈ ಕ್ರೀಡಾಪಟು ತನ್ನದೇ ಆದ ರಾಷ್ಟ್ರೀಯ ದಾಖಲೆಯನ್ನು ಮುರಿದರಲ್ಲದೇ ವಿಶ್ವ ದಾಖಲೆ ಸಹ ನಿರ್ಮಿಸಿದ್ರು.
ಕಳೆದ ತಿಂಗಳು ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿಟಿ ಆಫ್ ಲಿಸ್ಬನ್ ಅಥ್ಲೆಟಿಕ್ಸ್ ಟೂರ್ನಿಯಲ್ಲಿ 83.18 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ರು. ಪ್ರತಿಕೂಲ ಹವಾಮಾನದ ಹೊರತಾಗಿಯೂ ನೀರಜ್ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಸಾಕಷ್ಟು ಗಾಳಿ ಇದ್ದರೂ ಸಹಾ ಏಷ್ಯನ್ ಗೇಮ್ಸ್ ಜಾವಲಿನ್ ಚಾಂಪಿಯನ್ 83.18 ಮೀಟರ್ ದೂರ ಎಸೆದಿದ್ದರು.
ಚೋಪ್ರಾ ಅವರಿಗೆ ಇದು ಅವರ ಸ್ಥಿರತೆಯ ಅಭಿವ್ಯಕ್ತಿಯಾಗಿತ್ತು. ಮೊಣಕೈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಸುಮಾರು ಒಂದು ವರ್ಷದ ನಂತರ ಮತ್ತೆ ಟ್ರ್ಯಾಕ್‌ಗೆ ಬಂದ ಚೋಪ್ರಾ ತಮ್ಮ ವಿರುದ್ಧ ಕೆಲವರು ಹೊಂದಿದ್ದ ಅಪನಂಬಿಕೆಗಳು ತಪ್ಪೆಂದು ಸಾಬೀತುಪಡಿಸಲು ಅತ್ಯುನ್ನತ ಪ್ರದರ್ಶನವನ್ನು ನೀಡುವ ಅನಿವಾರ್ಯತೆ ಎದುರಾಗಿತ್ತು . ಅವರು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ರು.
ಕೆಲವು ದಿನಗಳ ಹಿಂದೆ ಪಟಿಯಾಲದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ, ಚೋಪ್ರಾ ಜಾವಲಿನ್ ಅನ್ನು 87.80 ಮೀ. ಎಸೆಯುವ ಮೂಲಕ ಮತ್ತೊಂದು ಸ್ಥಿರತೆಯ ಪ್ರದರ್ಶನ ನೀಡಿದ್ರು.
ಇದು ಅವರ ಮೊದಲ ಪ್ರಮುಖ ಪ್ರಶಸ್ತಿಯಾದ ವಿಯೆಟ್ನಾಂನಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್ ಚಿನ್ನವನ್ನು ಗೆದ್ದಾಗ 2016 ರಲ್ಲಿ ಪ್ರಾರಂಭವಾದ ಕ್ರೀಡಾ ಸ್ಥಿರತೆಯ ಮುಂದುವರಿಕೆಯಾಗಿದೆ. ಅವರು ಈ ಹಿಂದೆ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನವನ್ನು ಗೆದ್ದು ಬೀಗಿದ್ದ ಪೋಲೆಂಡ್ನಲ್ಲಿ ಮುಂದಿನ ತಿಂಗಳು ಉತ್ತಮ ಪ್ರದರ್ಶನ ನೀಡಲಿದ್ದಾರೆ.
2017 ರಲ್ಲಿ ಭುವನೇಶ್ವರದಲ್ಲಿ ನಡೆದ ಕಾಂಟಿನೆಂಟಲ್ ಚಾಂಪಿಯನ್‌ಶಿಪ್ ಅಲ್ಲಿ 85.23 ಮೀಟರ್ ಜಾವಲಿನ್ ಎಸೆದದ್ದು 23 ರ ಹರೆಯದ ನೀರಜ್ ಚೋಪ್ರಾ ಅವರು ಏಷ್ಯನ್ ಟ್ರ್ಯಾಕ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ. ಇವರ ಪ್ರದರ್ಶನಗಳನ್ನು ಗಮನಿಸಿದ ಹಲವರು ಇವರು ಭಾರತದ ಅಥ್ಲೆಟಿಕ್ಸ್ನ ಭರವಸೆಯ ಕಿರಣ ಎನ್ನಲಾಯ್ತು.
ಏಪ್ರಿಲ್ 2018 ರಲ್ಲಿ, ಅವರು 86.47 ಮೀಟರ್ ಜಾವಲಿನ್ ಎಸೆತದಿಂದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ಸಾಧನೆಯೊಂದಿಗೆ, ಚೋಪ್ರಾ ಕಾಮನ್ವೆಲ್ತ್ ಗೇಮ್ನಲ್ಲಿ ಜಾವೆಲಿನ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ದೋಹಾ ಡೈಮಂಡ್ ಲೀಗ್‌ನಲ್ಲಿ ಈ ಬಾರಿ 87.43 ಮೀಟರ್ ಎಸೆದದ್ದು, ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ಇನ್ನಷ್ಟು ಸುಧಾರಿಸಿತು.ಆಸ್ಟ್ರೇಲಿಯಾದ ತೀರದಲ್ಲಿ ಗೆದ್ದು ಭಾರತೀಯರನ್ನು ದಿಗ್ಭ್ರಮೆಗೊಳಿಸಿದ ನಾಲ್ಕು ತಿಂಗಳ ನಂತರ, ಚೋಪ್ರಾ 88.06 ಮೀಟರ್ ಅದ್ಭುತ ಎಸೆತದಿಂದ ಏಷ್ಯನ್ ಗೇಮ್ಸ್ ಚಿನ್ನವನ್ನು ಗೆಲ್ಲುವ ಮೂಲಕ ತಮ್ಮ ಶ್ರೇಷ್ಠ ವೃತ್ತಿಜೀವನಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿಸಿದರು. ಈ ಜಕಾರ್ತಾ ಏಷ್ಯಾಡ್ ಪ್ರದರ್ಶನವೇ ನೀರಜ್ ಚೋಪ್ರಾ ಅವರನ್ನು ಟೋಕಿಯೊದಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆಯ ಅಥ್ಲೆಟಿಕ್ ಆಗಿ ಮಾಡಿದೆ. ಯಶಸ್ಸು ಬರುತ್ತಿದ್ದಂತೆ, ಯುವ ಜಾವಲಿನ್ ಥ್ರೋ ಎಸೆತಗಾರನ ಮೇಲಿನ ಸುತ್ತಲೂ ನಿರೀಕ್ಷೆಗಳು ಕೂಡ ಗಗನಕ್ಕೇರಿವೆ.
ಇನ್ನು ಯುರೋಪ್ ಪ್ರವಾಸವು ನೀರಜ್ ಮಟ್ಟಿಗೆ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸುವ ವೇದಿಕೆಯಾಗಿರಲಿಲ್ಲ, ಏಕೆಂದರೆ ಟೋಕಿಯೊದಲ್ಲಿ ತನ್ನ ಅತ್ಯುತ್ತಮ ನೀಡಲು ಪ್ರದರ್ಶನ ನೀಡಲು ಗಾಯದಿಂದ ಮುಕ್ತವಾಗಿರಬೇಕಿತ್ತು. ಅವರು ವೀಸಾ ಸಮಸ್ಯೆಗಳಿಂದಾಗಿ ಲಂಡನ್ ಡೈಮಂಡ್ ಲೀಗ್ ಮಿಸ್ ಮಾಡಿಕೊಂಡರು. ಅದರ ಬದಲಿಗೆ ತರಬೇತಿಯತ್ತ ಗಮನಹರಿಸಿದರು.
ಕಳೆದ ತಿಂಗಳು ಫಿನ್‌ಲ್ಯಾಂಡ್‌ನ ಕುರ್ಟೇನ್‌ನಲ್ಲಿ, ನಡೆಯುತ್ತಿರುವ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ಜಾವೆಲಿನ್ ಎಸೆತಗಾರನಿಗೆ ಜರ್ಮನಿಯ ಜೊಹಾನ್ಸ್ ವೆಟ್ಟರ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶಾರ್ನ್ ವಾಲ್ಕಾಟ್ ಅವರೊಂದಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಇದರಲ್ಲಿ ನೀರಜ್ ಮೂರನೇ ಸ್ಥಾನ ಗಳಿಸಿದ್ರು.
ಪ್ರಸ್ತುತ ಅವರ ಸಾಮರ್ಥ್ಯ ಅವಲೋಕಿಸಿದಾಗ ವಿಶ್ವದ 16 ನೇ ಶ್ರೇಯಾಂಕಿತ ನೀರಜ್ ಚೋಪ್ರಾ ಟೋಕಿಯೊದಲ್ಲಿ ನಡೆಯಲಿರುವ ಒಲಂಪಿಕ್ಸ್ನಲ್ಲಿ ಭಾರತದ ಭರವಸೆಯ ಅಥ್ಲೆಟ್ ಆಗಿ ಹೊರಹೊಮ್ಮಿದ್ದಾರೆ.