ETV Bharat / bharat

Tokyo Olympics: ಪದಕದತ್ತ ಪಿ.ವಿ. ಸಿಂಧು ಇನ್ನೊಂದು ಹೆಜ್ಜೆ..ನಾಕೌಟ್​​ ಹಂತಕ್ಕೆ 'ಬೆಳ್ಳಿ ತಾರೆ'

author img

By

Published : Jul 28, 2021, 8:45 AM IST

Updated : Jul 29, 2021, 8:04 PM IST

ಹಾಂಕಾಂಗ್‌ನ ಚೆಯುಂಗ್ ನ್ಗಾನ್ ಯಿ ವಿರುದ್ಧ ಭಾರತದ ಪಿ.ವಿ ಸಿಂಧು 2-0 ಅಂತರದಿಂದ ಜಯಗಳಿಸಿದ್ದಾರೆ.

PV Sindhu
ಪಿ.ವಿ ಸಿಂಧು

ಟೋಕಿಯೋ: ಭಾರತದ ಭರವಸೆಯ ಆಟಗಾರ್ತಿ ಮತ್ತು 2016ರ ರಿಯೊ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಟೋಕಿಯೋ ಒಲಿಂಪಿಕ್ಸ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು, ಹಾಂಕಾಂಗ್‌ನ ಚೆಯುಂಗ್ ನ್ಗಾನ್ ಯಿ ವಿರುದ್ಧ 2-0 ಅಂತರದಿಂದ ಜಯಗಳಿಸಿದ್ದಾರೆ. ಈ ಮೂಲಕ ಮಹಿಳೆಯರ ಸಿಂಗಲ್ಸ್ ವಿಭಾಗದ 16 ನೇ ಸುತ್ತಿಗೆ ಅಂದರೆ ಪ್ರೀ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ. ಮೊದಲ ಗೇಮ್​​ ಅನ್ನು 21-9ರಿಂದ ಗೆದ್ದ ಸಿಂಧು, 2ನೇ ಪಂದ್ಯವನ್ನು 21-16ರಿಂದ ಜಯಿಸಿದರು.

ಗುರಿ ತಪ್ಪಿದ ಭಾರತದ ಬಿಲ್ಲುಗಾರ:

ಭಾರತದ ಮಹಿಳಾ ಹಾಕಿ ತಂಡವು ಪೂಲ್ ಎ ಹಾಕಿ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 1-4ರಿಂದ ಪರಾಭವಗೊಂಡಿದೆ. ಪುರುಷರ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ತರುಂದೀಪ್ ರಾಯ್​ 6-4 ಅಂಕಗಳ ಅಂತರದಿಂದ ಉಕ್ರೇನ್‌ನ ಒಲೆಕ್ಸಿ ಹುನ್ಬಿನ್ ವಿರುದ್ಧ ಜಯಗಳಿಸಿದ್ದರು. ಇದೀಗ ಇಸ್ರೇಲ್​​​​​​​ ಶ್ಯಾನ್ನಿ ವಿರುದ್ಧ 6-5 ಅಂಕಗಳಿಂದ ಸೋಲು ಕಂಡಿದ್ದಾರೆ.

ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸೇರಿದಂತೆ ಇತರ ಆರ್ಚರಿ ಪಟುಗಳು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಸೈಲಿಂಗ್​ ಮತ್ತು ರೋಯಿಂಗ್ ಸ್ಪರ್ಧೆಗಳಲ್ಲಿ ಪೂಜಾ ರಾಣಿ ಸ್ಪರ್ಧಿಸಲಿದ್ದಾರೆ.

Last Updated : Jul 29, 2021, 8:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.