ETV Bharat / bharat

Tokyo Olympics: ಭಾರತೀಯ ಹಾಕಿ ತಂಡದ ಶುಭಾರಂಭ, ನ್ಯೂಜಿಲ್ಯಾಂಡ್​ ವಿರುದ್ಧ ರೋಚಕ ಜಯ - ಭಾರತೀಯ ಹಾಕಿ ತಂಡದ ಶುಭಾರಂಭ

ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಭಾರತದ ಹಾಕಿ ತಂಡವು ಶುಭಾರಂಭ ಮಾಡಿದ್ದು, ಕಿವೀಸ್ ಪಡೆಯ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

Tokyo Olympics: India beats New Zealand 3-2
Tokyo Olympics: ಭಾರತೀಯ ಹಾಕಿ ತಂಡದ ಶುಭಾರಂಭ, ನ್ಯೂಜಿಲ್ಯಾಂಡ್​ ವಿರುದ್ಧ ರೋಚಕ ಜಯ
author img

By

Published : Jul 24, 2021, 9:53 AM IST

ಟೋಕಿಯೋ(ಜಪಾನ್): ಭಾರತದ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭ ಕಂಡಿದೆ. ಸೌತ್ ಪಿಚ್‌ನ ಓಯಿ ಹಾಕಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ಅನ್ನು 3-2 ಗೋಲುಗಳಿಂದ ಸೋಲಿಸಿದೆ.

ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದ್ದು, ರೂಪಿಂದರ್ ಪಾಲ್ ಸಿಂಗ್ ಒಂದು ಗೋಲು ಗಳಿಸಿದ್ದಾರೆ. ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅವರ ಅತ್ಯದ್ಭುತ ಗೋಲ್​ ಕೀಪಿಂಗ್ ಕಿವೀಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಮೊದಲು ಸಿಕ್ಕ ಪೆನಾಲ್ಟಿ ಕಾರ್ನರ್ ವಿಫಲವಾಗಿದ್ದ ರೂಪಿಂದರ್‌ 10ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದಕ್ಕೂ ಮೊದಲು ಕೇನ್‌ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಭಾಗದಲ್ಲಿ 1-1 ಸಮಬಲವನ್ನು ಎರಡೂ ತಂಡಗಳು ಕಾಯ್ದುಕೊಂಡಿದ್ದವು.

ಎರಡನೇ ಕ್ವಾರ್ಟರ್​ನಲ್ಲಿ ಎರಡೂ ತಂಡಗಳ ಹಣಾಹಣಿ ಜೋರಾಗಿತ್ತು. 26ನೇ ನಿಮಿಷದಲ್ಲಿ ಹರ್ಮನ್‌ ಪ್ರೀತ್ ಪೆನಾಲ್ಟಿ ಕಾರ್ನರ್ ಅನ್ನು ಗೋಲ್ ಬಾರಿಸಿ ಒಂದು ಗೋಲ್​​​ನ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಪ್ರಥಮಾರ್ಧದ ಅಂತ್ಯದ ವೇಳೆಗೆ ಭಾರತ 2-1ರ ಮುನ್ನಡೆ ಕಾಯ್ದುಕೊಂಡಿತ್ತು.

ನಂತರ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತೀಯ ತಂಡಕ್ಕೆ ಮತ್ತೊಂದು ಗೋಲು ದಾಖಲಿಸಿದರು. ನ್ಯೂಜಿಲೆಂಡ್‌ನ ಸ್ಟೀವನ್‌ ಜೆನ್ನೀಸ್‌ ಗೋಲು ಬಾರಿಸಿದ್ದರಿಂದ ಅವರು ನ್ಯೂಜಿಲೆಂಡ್ ಎರಡು ಗೋಲು ಗಳಿಸಲು ಸಾಧ್ಯವಾಯಿತು.

ಇದನ್ನೂ ಓದಿ: Tokyo Olympics: ಆರ್ಚರಿ ಮಿಶ್ರ ವಿಭಾಗದಲ್ಲಿ ಕ್ವಾರ್ಟರ್​​ ಫೈನಲ್​ ತಲುಪಿದ ಭಾರತೀಯ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.