ETV Bharat / bharat

2000 ರೂ. ನೋಟುಗಳ ವಿನಿಮಯ, ಠೇವಣಿಗೆ ಇಂದೇ ಕೊನೆಯ ದಿನ

author img

By ETV Bharat Karnataka Team

Published : Sep 30, 2023, 8:30 AM IST

Updated : Sep 30, 2023, 10:17 AM IST

2000 ರೂ ನೋಟುಗಳ ವಿನಿಮಯ ಅಥವಾ ಠೇವಣಿ ಮಾಡಲು ಇಂದು ಕೊನೆಯ ದಿನವಾಗಿದೆ.

2000 ರೂ ನೋಟುಗಳ ವಿನಿಮಯದ ಕೊನೆಯ ದಿನ
2000 ರೂ ನೋಟುಗಳ ವಿನಿಮಯದ ಕೊನೆಯ ದಿನ

ಹೈದರಾಬಾದ್: 2000 ರೂಪಾಯಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ್ದ ಗಡುವು ಇಂದು ಮುಕ್ತಾಯಗೊಳ್ಳಲಿದೆ. ಕಳೆದ ಮೇ 19ರಂದು ರೂ.2000 ನೋಟುಗಳ ಚಲಾವಣೆಯನ್ನ ರದ್ದುಪಡಿಸಿ ಆರ್‌ಬಿಐ ಆದೇಶ ಮಾಡಿತ್ತು. 2018-19ರಲ್ಲಿ ಆರ್​ಬಿಐ ನೋಟುಗಳನ್ನು ಮುದ್ರಣ ನಿಲ್ಲಿಸಿತ್ತು. ಈನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸುಮಾರು ನಾಲ್ಕು ತಿಂಗಳ ಕಾಲಾವಕಾಶ ನೀಡಿ ಸೆಪ್ಟೆಂಬರ್ 30 ಕೊನೆಯ ದಿನಾಂಕ ನಿಗದಿಪಡಿಸಿತ್ತು. 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ಆರ್​ಬಿಐ ರೂ.2 ಸಾವಿರ ನೋಟುಗಳನ್ನು ಜಾರಿಗೊಳಿಸಿತ್ತು.

ಈ ಬಗ್ಗೆ ಮೇ 19ರಂದು ಆರ್​​ಬಿಐ ಪತ್ರಿಕಾ ಪ್ರಕಟಣೆಯಲ್ಲಿ, ರೂ.2000 ಮುಖಬೆಲೆಯ ನೋಟುಗಳನ್ನು ಠೇವಣಿ ಮಾಡುವ ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30, 2023 ರವರೆಗೆ ಲಭ್ಯವಿರುತ್ತದೆ. ಎಲ್ಲಾ ಬ್ಯಾಂಕ್‌ಗಳ ಶಾಖೆಗಳಲ್ಲಿ ಜನರು ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.

ಶೇ.93ರಷ್ಟು ನೋಟುಗಳನ್ನು ಜನರು ಬ್ಯಾಂಕ್‌ಗಳಿಗೆ ಹಿಂತಿರುಗಿಸಿದ್ದಾರೆ ಎಂದು ಸೆಪ್ಟೆಂಬರ್ 2ರಂದು ಆರ್‌ಬಿಐ ವರದಿ ಮಾಡಿತ್ತು. ಸುಮಾರು 87 ಪ್ರತಿಶತದಷ್ಟು ಠೇವಣಿಗಳಾಗಿ ಹಿಂತಿರುಗಿದ್ದರೇ, ಉಳಿದ 13 ಪ್ರತಿಶತದಷ್ಟು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರ್​ಬಿಐ ತಿಳಿಸಿತ್ತು. ಸೆಪ್ಟೆಂಬರ್ 1ರ ವರೆಗೆ ಶೇಕಡ 7 ರಷ್ಟು ರೂ. 2000 ನೋಟುಗಳು ಚಲಾವಣೆಯಲ್ಲಿವೆ ಎಂದು ವರದಿಯಾಗಿದೆ.

ರೂ. 2000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ರಿಸರ್ವ್ ಬ್ಯಾಂಕ್ ಇಂತಿಷ್ಟು ಮೊತ್ತವನ್ನು ನಿಗದಿಪಡಿಸಿದೆ. ವ್ಯಕ್ತಿಯೊಬ್ಬರು 20,000 ರೂ. ವರೆಗೆ ನೋಟುಗಳನ್ನು ಒಮ್ಮೆಗೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಬ್ಯಾಂಕಿಗೆ ಹೋಗಿ ಅಗತ್ಯ ಫಾರ್ಮ್ ಅನ್ನು ಭರ್ತಿ ಮಾಡಿ ನೋಟುಗಳನ್ನು ಠೇವಣೆ ಅಥವಾ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ದಿನಾಂಕ ವಿಸ್ತರಣೆ ಸಾಧ್ಯತೆ.. ಈಗಾಗಲೇ ₹ 2000 ನೋಟುಗಳ ವಿನಿಮಯ ಅಥವಾ ಠೇವಣಿಗೆ ನಾಲ್ಕು ತಿಂಗಳ ಹಿಂದೆಯೇ ಆದೇಶ ಹೊರಡಿಸಿ, ಅದಕ್ಕೆ ಸಂಬಂಧಿಸಿದಂತೆ ವಿವಿಧ ದಿನಾಂಕಗಳನ್ನು ಆರ್​ಬಿಐ ಹೊರಡಿಸಿತ್ತು. ಇದರ ಪ್ರಕಾರ ಇಂದು ಕೊನೆಯ ದಿನವಾಗಿದೆ. ಆದ್ರೆ ಕೆಲ ಮೂಲಗಳ ಪ್ರಕಾರ ಕೊನೆಯ ದಿನವನ್ನು ಒಂದು ತಿಂಗಳ ಕಾಲ ವಿಸ್ತರಿಸುವ ಸಾಧ್ಯತೆ ಎಂದು ತಿಳಿದುಬಂದಿದೆ. ಈ ದಿನಾಂಕ ವಿಸ್ತರಣೆ ಆದಲ್ಲಿ 2000 ಮುಖಬೆಲೆಯ ನೋಟನ್ನು ವಿನಿಮಯ ಅಥವಾ ಠೇವಣಿ ಮಾಡುವವರಿಗೆ ಅನುಕೂಲತೆ ಸಿಗಲಿದೆ.

ನೋಟು ವಿನಿಮಯ ಮಾಡಿಕೊಳ್ಳಲು ಹೀಗೆ ಮಾಡಿ..

  • ಬ್ಯಾಂಕ್ ಖಾತೆದಾರರು ತಮ್ಮ ಸಮೀಪದ ಶಾಖೆಯಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದಾಗಿದೆ.
  • 2000 ನೋಟುಗಳ ವಿನಿಮಯಕ್ಕೆ ಯಾವುದೇ ಗುರುತಿನ ಚೀಟಿಯ ಅಗತ್ಯವಿಲ್ಲ.
  • ಬ್ಯಾಂಕ್ ಖಾತೆ ಹೊಂದಿರದವರು ಕೂಡ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.
  • ಒಬ್ಬ ವ್ಯಕ್ತಿ ಒಂದು ಬಾರಿಗೆ ರೂ.20,000 ವರೆಗೆ ಮಾತ್ರ ಬದಲಾವಣೆಗೆ ಅವಕಾಶ.
  • ನೋಟು ಬದಲಾವಣೆ ಸಂಪೂರ್ಣ ಉಚಿತವಾಗಿರಲಿದ್ದು, ಯಾವುದೇ ಪ್ರತ್ಯೇಕ ಶುಲ್ಕ ಪಾವತಿಸುವ ಅಗತ್ಯವಿಲ್ಲ.
  • 50,000 ರೂಪಾಯಿಗಿಂತ ಹೆಚ್ಚಿನ ಹಣ ಠೇವಣಿ ಇಡಲು ಬಯಸಿದರೆ ಕಡ್ಡಾಯವಾಗಿ ಪ್ಯಾನ್​ಕಾರ್ಡ್ ಪ್ರೂಫ್​​ ನೀಡಬೇಕಿದೆ.

ಇದನ್ನೂ ಓದಿ: 500 ರೂ ನೋಟುಗಳನ್ನ ವಾಪಸ್​ ಪಡೆಯುವ ಮಾತೇ ಇಲ್ಲ..1000 ರೂ ನೋಟುಗಳ ಜಾರಿಯೂ ಇಲ್ಲ: ಆರ್​​​ಬಿಐ

Last Updated : Sep 30, 2023, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.