ETV Bharat / bharat

ಎರಡು ಗುಂಪುಗಳ ನಡುವೆ ಘರ್ಷಣೆ: ಇಬ್ಬರು ಯುವಕರ ಕೊಲೆ, ಮೂವರಿಗೆ ತೀವ್ರ ಗಾಯ!

ಸಣ್ಣ ವಿಚಾರಕ್ಕಾಗಿ ಆರಂಭಗೊಂಡ ಜಗಳವೊಂದು ಇಬ್ಬರ ಕೊಲೆಯಲ್ಲಿ ಅಂತ್ಯಗೊಂಡಿದ್ದು, ತಮಿಳುನಾಡಿನ ಜನರಲ್ಲಿ ಈ ಘಟನೆ ಬೆಚ್ಚಿ ಬೀಳಿಸಿದೆ.

Two Dalit youngsters killed in caste clash

author img

By

Published : Apr 9, 2021, 5:12 PM IST

ರಾಣಿಪೇಟೆ​(ತಮಿಳುನಾಡು): ಬೇರೆ ಬೇರೆ ಜಾತಿಗಳಿಗೆ ಸೇರಿದ್ದ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ರಾಣಿಪೇಟೆ ಜಿಲ್ಲೆಯ ಅರಕ್ಕೋಣಂನ ಗುರುವರಾಜನ್​ಪೇಟೆಯಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಸಾವನ್ನಪ್ಪಿದವರನ್ನ ಅರ್ಜುನ್​(26), ಸೂರ್ಯ(26) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಘರ್ಷಣೆ ನಡೆದಿದ್ದು, ಉಳಿದಂತೆ ಮಾಧನ್​, ವಲ್ಲರಸು ಮತ್ತು ಸೌಂದರಾಜನ್​ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಗೊಂಡವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹಸಿವು ತಾಳಲಾಗದೇ ಊಟ ಮಾಡಿ ಬಿಸಾಡಿದ ಫ್ಲೇಟ್ ನೆಕ್ಕಿದ ಬಾಲಕ... ವಿಡಿಯೋ ವೈರಲ್​!

ಬಸ್​ ನಿಲ್ದಾಣದ ಬಳಿ ದಲಿತ ಪುರುಷರು ಮಾಡಿದ ಸನ್ನೆ ವಿಚಾರವಾಗಿ ವಾಗ್ವಾದ ಶುರುವಾಗಿದ್ದು, ಈ ವೇಳೆ ಮತ್ತೊಂದು ಜಾತಿ ಜನರು ಜಗಳ ಮಾಡಿದ್ದಾರೆ. ಆರಂಭದಲ್ಲಿ ಎರಡು ಸಮುದಾಯದವರು ರಾಜಿ ಮಾಡಿಕೊಳ್ಳಲು ಮುಂದಾಗಿದ್ರೂ, ಇದು ತಾರಕ್ಕೇರಿ ಘರ್ಷಣೆಯಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, ಗಾಯಗೊಂಡವರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವನ್ನಪ್ಪಿರುವ ಯುವಕರ ಶವ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ವೇಳೆ ಹೆಚ್ಚಿನವರು ಮದ್ಯಪಾನ ಮಾಡಿದ್ರೂ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.