ETV Bharat / bharat

50 ಅಡಿ ಕಂದಕಕ್ಕೆ ಉರುಳಿ ಬಿದ್ದ ಊಟಿಯಿಂದ ಬರುತ್ತಿದ್ದ ಬಸ್​, 8 ಮಂದಿ ಪ್ರವಾಸಿಗರ ಸಾವು

ಪ್ರವಾಸ ಮುಗಿಸಿ ಊಟಿಯಿಂದ ಬರುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದು, 8 ಮಂದಿ ಸಾವನ್ನಪ್ಪಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.

ಕಂದಕಕ್ಕೆ ಉರುಳಿ ಬಿದ್ದ ಬಸ್​
ಕಂದಕಕ್ಕೆ ಉರುಳಿ ಬಿದ್ದ ಬಸ್​
author img

By ETV Bharat Karnataka Team

Published : Sep 30, 2023, 10:59 PM IST

Updated : Sep 30, 2023, 11:05 PM IST

ನೀಲಗಿರಿ (ತಮಿಳುನಾಡು): ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿ ತಾಣ ಊಟಿಯಿಂದ ವಾಪಸ್​ ಆಗಿದ್ದ 59 ಜನರಿದ್ದ ಬಸ್​ 50 ಅಡಿ ಆಳದ ಕಂದಕಕ್ಕೆ ಬಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಭೀಕರವಾಗಿದ್ದು, ಹಲವಾರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಶನಿವಾರ ಸಂಜೆ 5.15 ನಿಮಿಷ ಸುಮಾರಿನಲ್ಲಿ ಊಟಿಯಿಂದ ತೆಂಕಶಿ ಕಡೆಗೆ 59 ಜನರಿದ್ದ ಪ್ರವಾಸಿ ಬಸ್​ ಬರುತ್ತಿತ್ತು. ಈ ಸಂದರ್ಭದಲ್ಲಿ ಕೂನೂರಿನಿಂದ ಮೆಟ್ಟುಪಾಳ್ಯಂ ರಸ್ತೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ತಿರುವಿನಲ್ಲಿ 50 ಅಡಿ ಕಮರಿಗೆ ಉರುಳಿಬಿದ್ದಿದೆ. ಬಸ್​ ಉರುಳಿ ಬಿದ್ದ ರಭಸಕ್ಕೆ ಹಲವು ಬಾರಿ ಪಲ್ಟಿಯಾಗಿದೆ. ಇದರಿಂದ ಅದರಲ್ಲಿದ್ದ ಪ್ರವಾಸಿಗರು ತೀವ್ರವಾಗಿ ಗಾಯಗೊಂಡಿದ್ದರು.

ಬಸ್​ ಅಪಘಾತಕ್ಕೀಡಾದ ವಿಷಯ ತಿಳಿದ ಪೊಲೀಸರು, ರಕ್ಷಣಾ ಪಡೆಗಳು, ಹೆದ್ದಾರಿ ಇಲಾಖೆ ಗಸ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹಲವರನ್ನು ಕಂದಕದಿಂದ ಮೇಲೆತ್ತಿ ರಕ್ಷಿಸಲ್ಪಟ್ಟವರನ್ನು ಕೂನೂರು ಮತ್ತು ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಬೇರೆಡೆ ಅಸುನೀಗಿದ್ದಾರೆ.

ಸರ್ಕಾರ ಪರಿಹಾರ ಘೋಷಣೆ: ಬಸ್​ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಅಲ್ಲದೇ ಸಿಎಂ ಸ್ಟಾಲಿನ್ ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ, ರಕ್ಷಣಾ ಪ್ರಕ್ರಿಯೆ ಹೆಚ್ಚಿಸುವಂತೆ ಪ್ರವಾಸೋದ್ಯಮ ಸಚಿವ ಕೆ.ರಾಮಚಂದ್ರನ್ ಅವರಿಗೆ ಸೂಚಿಸಿದ್ದೇನೆ. ಗಂಭೀರ ಮತ್ತು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವವರಿಗೆ ವಿಶೇಷ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಮೃತರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಾಳುಗಳಿಗೆ ತಲಾ 50,000 ರೂಪಾಯಿಗಳನ್ನು ನೀಡಲು ಆದೇಶಿಸಿದ್ದೇನೆ. ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ನೆರವು ನೀಡಲಾಗುವುದು ಎಂದಿದ್ದಾರೆ.

ಬಸ್ಸಿನಲ್ಲಿದ್ದವರ ಪತ್ತೆಗಾಗಿ ಮತ್ತು ಅವರ ಕುಟುಂಬಸ್ಥರಿಗಾಗಿ ಸರ್ಕಾರ ಸಹಾಯವಾಣಿ ಸಂಖ್ಯೆ 1077 ಮತ್ತು 9443763207 ಅನ್ನು ತೆರೆದಿದೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ದ ವಾತಾವರಣ: ಕಡಲತೀರದಲ್ಲಿ ಲಂಗರು ಹಾಕಿದ ನೂರಾರು ಬೋಟ್‌ಗಳು

Last Updated : Sep 30, 2023, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.