ETV Bharat / bharat

ಆನ್‌ಲೈನ್ ಕ್ಲಾಸ್​ಗೆ ಟವೆಲ್​ನಲ್ಲಿ ಬಂದ ಪೋಲಿ ಮೇಷ್ಟ್ರು.. ವಿದ್ಯಾರ್ಥಿಗಳಿಂದ ದೂರು - ಆನ್‌ಲೈನ್ ಕ್ಲಾಸ್​ಗೆ ಟವೆಲ್​ನಲ್ಲಿ ಬಂದ ಶಿಕ್ಷಕ

ಲೈಂಗಿಕ ಕಿರುಕುಳ ಆರೋಪದ ಮೇಲೆ ವಿದ್ಯಾರ್ಥಿಗಳು ಆರೋಪಿಸಿದ ಹಿನ್ನೆಲೆ ಚೆನ್ನೈ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಆತನ ವಿರುದ್ಧವಾಗಿ ಆತ ಕಳುಹಿಸಿರುವ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ವಿದ್ಯಾರ್ಥಿಗಳು ಸಾಕ್ಷಿಯಾಗಿ ನೀಡಿದ್ದಾರೆ..

teacher
ಚೆನ್ನೈ
author img

By

Published : May 25, 2021, 12:56 PM IST

ಚೆನ್ನೈ(ತಮಿಳುನಾಡು) : ಆತ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಗುರು. ಆದ್ರೆ, ಆನ್‌ಲೈನ್ ಕ್ಲಾಸ್​ನಲ್ಲಿ ಆತ ಮಾಡ್ತಿದ್ದ ಪಾಠಗಳೇ ಬೇರೆ. ಇದೀಗ ಆತನ ವರ್ತನೆಗೆ ಬೇಸತ್ತ ವಿದ್ಯಾರ್ಥಿಗಳು ದೂರು ನೀಡಿದ ಹಿನ್ನೆಲೆ ಪೊಲೀಸರ ಅತಿಥಿಯಾಗಿದ್ದಾನೆ.

ಕೊರೊನಾ ಲಾಕ್​ಡೌನ್​ ಕಾರಣದಿಂದ ತರಗತಿಗಳೆಲ್ಲ ಈಗ ಆನ್​ಲೈನ್​ನಲ್ಲಿ ನಡೆಯುತ್ತಿವೆ. ಇಂತಹ ತರಗತಿ ಸಮಯದಲ್ಲಿ ಶಿಕ್ಷಕನೊಬ್ಬ ಮಕ್ಕಳೊಂದಿಗೆ ಪೋಲಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.

ಚೆನ್ನೈನ ಖಾಸಗಿ ಶಾಲಾ ವಾಣಿಜ್ಯ ಶಿಕ್ಷಕ ರಾಜಗೋಪಾಲ್ ಎಂಬಾತ ಆನ್‌ಲೈನ್ ತರಗತಿಗಳ ಸಂದರ್ಭದಲ್ಲಿ ಟವೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಸಿನಿಮಾಗಳು, ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ಅಶ್ಲೀಲ ಲಿಂಕ್‌ಗಳನ್ನು ಕಳುಹಿಸುವುದು, ಲೈಂಗಿಕ ಕಾಮೆಂಟ್‌ಗಳನ್ನು ರವಾನಿಸಿರುವುದಾಗಿ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ಲೈಂಗಿಕ ಕಿರುಕುಳ ಆರೋಪದ ಮೇಲೆ ವಿದ್ಯಾರ್ಥಿಗಳು ಆರೋಪಿಸಿದ ಹಿನ್ನೆಲೆ ಚೆನ್ನೈ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಆತನ ವಿರುದ್ಧವಾಗಿ ಆತ ಕಳುಹಿಸಿರುವ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ವಿದ್ಯಾರ್ಥಿಗಳು ಸಾಕ್ಷಿಯಾಗಿ ನೀಡಿದ್ದಾರೆ.

ಘಟನೆ ಖಂಡಿಸಿದ ಡಿಎಂಕೆ ಸಂಸತ್ ಸದಸ್ಯೆ ಕನಿಮೋಳಿ, ಸಂಸದ ದಯಾನಿಧಿ ಮಾರನ್ ಮತ್ತು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಾಮೊಳಿ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.