ETV Bharat / bharat

ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ವಿಶೇಷ ಡಿಜಿಪಿ ಸಸ್ಪೆಂಡ್​

ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದ ಎರಡು ದಿನಗಳ ಬಳಿಕ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಿಶೇಷ ಡಿಜಿಪಿಯನ್ನು ತಮಿಳುನಾಡು ಸರ್ಕಾರ ಸಸ್ಪೆಂಡ್​ ಮಾಡಿದೆ.

author img

By

Published : Mar 19, 2021, 10:45 AM IST

TN govt suspends former special dgp on sexual harassment charges
ವಿಶೇಷ ಡಿಜಿಪಿ ಸಸ್ಪೆಂಡ್​

ಚೆನ್ನೈ (ತಮಿಳುನಾಡು): ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್​ ಅಧಿಕಾರಿ, ವಿಶೇಷ ಪೊಲೀಸ್​ ಮಹಾನಿರ್ದೇಶಕರನ್ನು ತಮಿಳುನಾಡು ಸರ್ಕಾರ ನಿನ್ನೆ ಅಮಾನತುಗೊಳಿಸಿದೆ.

ಈ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ಮದ್ರಾಸ್ ಹೈಕೋರ್ಟ್, ಈ ಹಿಂದೆ ಮಹಿಳಾ ಪೊಲೀಸ್​ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಚೆಂಗಲ್‌ಪೇಟೆ ಎಸ್‌ಪಿಯನ್ನು ತಕ್ಷಣವೇ ಸರ್ಕಾರ ಸಸ್ಪೆಂಡ್​ ಮಾಡಿತ್ತು. ಆದರೆ, ವಿಶೇಷ ಡಿಜಿಪಿಯನ್ನು ಇನ್ನೂ ಏಕೆ ಅಮಾನತುಗೊಳಿಸಲಾಗಿಲ್ಲ ಎಂದು ಪ್ರಶ್ನಿಸಿತ್ತು. ನ್ಯಾಯಾಲಯ ಪ್ರಶ್ನಿಸಿದ ಎರಡು ದಿನಗಳ ಬಳಿಕ ಸರ್ಕಾರ ಅವರನ್ನು ಸಸ್ಪೆಂಡ್​ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಅಳಿಯಂದಿರಿಂದ ಕಿರುಕುಳ ಆರೋಪ: ನ್ಯಾಯಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಲೈಂಗಿಕ ಕಿರುಕುಳದ ದೂರಿನ ಮೇರೆಗೆ ಈವರೆಗೆ ನಮ್ಮ ವಿಶೇಷ ತಂಡ ನಡೆಸಿದ ತನಿಖೆಯ ಆಧಾರದ ಮೇಲೆ ಮತ್ತು ಈ ವಿಷಯದ ಬಗ್ಗೆ ಮದ್ರಾಸ್ ಹೈಕೋರ್ಟ್ ನಡೆಸಿದ ವಿಚಾರಣೆ ಆಧಾರದ ಮೇಲೆ ಐಪಿಎಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.