ETV Bharat / bharat

ಜಲ್ಲಿಕಟ್ಟು ಆಯೋಜಿಸಲು ಗ್ರೀನ್‌ ಸಿಗ್ನಲ್‌: ಕಂಡೀಶನ್ಸ್‌ ಅಪ್ಲೈ ಎಂದ ತಮಿಳುನಾಡು ಸರ್ಕಾರ - ಜಲ್ಲಿಕಟ್ಟು ಆಯೋಜನೆಗೆ ತಮಿಳುನಾಡು ಪರವಾನಿಗೆ

ಮೂರನೇ ಅಲೆ ಕೋವಿಡ್ ಮಧ್ಯೆ ತಮಿಳುನಾಡಿನಲ್ಲಿ ದೇಶಿ ಕ್ರೀಡೆ ಜಲ್ಲಿಕಟ್ಟು ಆಯೋಜಿಸಲು ತಮಿಳುನಾಡು ಸರ್ಕಾರ ಹಸಿರು ನಿಶಾನೆ ತೋರಿದ್ದು, ಈ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿದೆ.

TN govt permits Jallikattu
TN govt permits Jallikattu
author img

By

Published : Jan 10, 2022, 6:10 PM IST

ಚೆನ್ನೈ(ತಮಿಳುನಾಡು): ಕೊರೊನಾ, ಒಮಿಕ್ರಾನ್​ ಮಧ್ಯೆ ರಾಜ್ಯದ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಕೊರೊನಾ ನಿಯಮಗಳನ್ನು ಪಾಲನೆ ಮಾಡುವುದೂ ಸೇರಿದಂತೆ ಮಾರ್ಗದರ್ಶಿ ಸೂತ್ರಗಳನ್ನು​ ಜಾರಿಗೊಳಿಸಿದೆ.

TN govt permits Jallikattu

ಪೊಂಗಲ್​ ಸಂಭ್ರಮಾಚರಣೆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜನೆ ಮಾಡಲಾಗುತ್ತದೆ. ಆದರೆ, ಈ ಸಲದ ಸ್ಪರ್ಧೆಯಲ್ಲಿ ಭಾಗಿಯಾಗುವ ಗೂಳಿಗಳ ಮಾಲೀಕರು ಹಾಗೂ ಸಹಾಯಕರು ಎರಡು ಡೋಸ್​​ ಕೋವಿಡ್​ ವ್ಯಾಕ್ಸಿನ್​​ ಪಡೆದುಕೊಳ್ಳಲೇಬೇಕಿದೆ. ಇದರ ಜೊತೆಗೆ, ಸ್ಪರ್ಧೆಯಲ್ಲಿ ಭಾಗಿಯಾಗುವುದಕ್ಕೂ 48 ಗಂಟೆಗಳ ಮುಂಚಿತವಾಗಿ ಕೋವಿಡ್ ಆರ್​​ಟಿ-ಪಿಸಿಆರ್​ ಪರೀಕ್ಷೆ ಮಾಡಿಸಿ, ಪ್ರಮಾಣಪತ್ರ ನೀಡುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ನಟ ಸೋನು ಸೂದ್​ ಸಹೋದರಿ ಕಾಂಗ್ರೆಸ್​ ಸೇರ್ಪಡೆ.. ಪಂಜಾಬ್​ ಚುನಾವಣೆಗೆ ಸ್ಪರ್ಧೆ!

ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಯೋಜಕರು, ಗೂಳಿ ಮಾಲೀಕರು ಹಾಗೂ ಇತರೆ ಸಿಬ್ಬಂದಿಗೆ ಗುರುತಿನ ಚೀಟಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಜಲ್ಲಿಕಟ್ಟು ವೀಕ್ಷಿಸಲು ಟಿವಿ ವಾಹಿನಿಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡುವುದಾಗಿ ಸರ್ಕಾರ ತಿಳಿಸಿದೆ.

TN govt permits Jallikattu

ಕಾರ್ಯಕ್ರಮದಲ್ಲಿ ಸ್ಪರ್ಧೆ ವೀಕ್ಷಣೆ ಮಾಡುವವರ ಸಂಖ್ಯೆ 150 ಹಾಗೂ ಕುಳಿತುಕೊಳ್ಳಲು ಶೇ. 50ರಷ್ಟು ಆಸನದ ಸಾಮರ್ಥ್ಯಕ್ಕೆ ಅವಕಾಶ ನೀಡಲಾಗಿದೆ. ಸ್ಪರ್ಧೆ ನೋಡಲು ಭಾಗಿಯಾಗುವ ಎಲ್ಲರೂ ಆರ್​ಟಿ-ಪಿಸಿಆರ್​​ ವರದಿ ಜೊತೆಗೆ ಕೋವಿಡ್​​ನ ಎರಡು ಡೋಸ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.