ಚೆನ್ನೈ : ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ವ್ಯಾಪ್ತಿಯಿಂದ ರಾಜ್ಯಕ್ಕೆ ವಿನಾಯಿತಿ ಕೋರುವ ತಮಿಳುನಾಡು ವಿಧಾನಸಭೆಯ ಮಸೂದೆಯನ್ನು ರಾಜ್ಯಪಾಲ ಆರ್‌ಎನ್ ರವಿ, ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಬುಧವಾರ ಹೇಳಿದರು. ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ರಾಜ್ಯಪಾಲರ ಕಾರ್ಯದರ್ಶಿಯಿಂದ ತಿಳಿಸಲಾಗಿದೆ ಎಂದು ಸ್ಟಾಲಿನ್ ರಾಜ್ಯ ವಿಧಾನಸಭೆಗೆ ತಿಳಿಸಿದರು.
ನೀಟ್ನಿಂದ ರಾಜ್ಯಕ್ಕೆ ವಿನಾಯಿತಿ ನೀಡುವಂತೆ ನಾವೆಲ್ಲಾ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಈ ಹೋರಾಟದ ಭಾಗವಾಗಿ ಮುಂದಿನ ಹಂತದಲ್ಲಿ ಮಸೂದೆಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡುವಂತೆ ಕೇಂದ್ರವನ್ನು ಒತ್ತಾಯಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಜಂಟಿಯಾಗಿ ತೆಗೆದುಕೊಳ್ಳಬೇಕು ಎಂದು ಸಿಎಂ ಸ್ಟಾಲಿನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತೆಯ ಮದುವೆಗೆ ತೆರಳಿ ವಿವಾದಕ್ಕೀಡಾದ ರಾಹುಲ್ ಗಾಂಧಿ: ಇವರು ಯಾರು ಗೊತ್ತೇ? ಹೇಳಿದರು.
ಕಳೆದ ವರ್ಷ ಮಸೂದೆಯನ್ನು ರಾಜ್ಯಪಾಲರು ಹಿಂದಿರುಗಿಸಿದ ನಂತರ ವಿಧಾನಸಭೆಯು ಫೆಬ್ರವರಿಯಲ್ಲಿ ಆಡಳಿತಾರೂಢ ಡಿಎಂಕೆ-ಪೈಲಟ್ ಮಾಡಿದ ನೀಟ್ ವಿರೋಧಿ ಮಸೂದೆಯನ್ನು ಎರಡನೇ ಬಾರಿಗೆ ಅಂಗೀಕರಿಸಿತು.