ETV Bharat / bharat

ನಿವಾರ್​ ಚಂಡಮಾರುತ ಭೀತಿ: ಚೆನ್ನೈನಲ್ಲಿ ಬಸ್​ ಸೇವೆ ಸ್ಥಗಿತ

author img

By

Published : Nov 24, 2020, 3:31 PM IST

ತಮಿಳುನಾಡು, ಪುದುಚೆರಿ ಕರಾವಳಿ ಭಾಗಕ್ಕೆ ಮುಂದಿನ 24 ಗಂಟೆಯಲ್ಲಿ ನಿವಾರ್​ ಚಂಡಮಾರುವ ಅಪ್ಪಳಿಸುವ ಭೀತಿಯಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಬಸ್​, ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಚೆನ್ನೈನಲ್ಲಿ ಚಂಡಮಾರುತ ಭೀತಿ
ಚೆನ್ನೈನಲ್ಲಿ ಚಂಡಮಾರುತ ಭೀತಿ

ಚೆನ್ನೈ: ಮುಂದಿನ 24 ಗಂಟೆಗಳಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ನಗರದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಾಗಿದೆ. ಇನ್ನು ರಾಜಧಾನಿ ಸೇರಿದಂತೆ 7 ಜಿಲ್ಲೆಗಳಲ್ಲಿ ಬಸ್​ ಸೇವೆ ಸ್ಥಗಿತಗೊಳಿಸಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯ ಮೀನುಗಾರ ಸುರಕ್ಷತೆ ಹಿನ್ನೆಲೆಯಲ್ಲಿ ಸಮೀಪ ಇರುವ ಬಂದರುಗಳಿಗೆ ತೆರಳಲು ಸೂಚಿಸಲಾಗಿದೆ.

ಇನ್ನು ನಿವಾರ್​ ಚಂಡಮಾರುತದ ಪ್ರಭಾವ ಹೆಚ್ಚಿರುವ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದ ದಕ್ಷಿಣ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಪುದುಚೆರಿಯಲ್ಲಿ ಇಂದು ರಾತ್ರಿ 9ರಿಂದ ಗುರುವಾರ (ನವೆಂಬರ್ 26) ಬೆಳಿಗ್ಗೆ 6ರವರೆಗೆ ಸಿಆರ್​ಪಿಸಿ ಸೆಕ್ಷನ್ 144ರ ಅಡಿ ಕರ್ಫ್ಯೂ ವಿಧಿಸಲಾಗಿದೆ. ಈ ಅವಧಿಯಲ್ಲಿ ತುರ್ತು ಸೇವೆಗಳು ಮಾತ್ರ ಲಭ್ಯ ಇರುತ್ತವೆ. ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಆರು ನಿಗದಿತ ರೈಲುಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಇದನ್ನು ಓದಿ: 'ನಿವಾರ್' ಸೈಕ್ಲೋನ್​ ಅಬ್ಬರ : ನಾಳೆ, ನಾಡಿದ್ದು ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್​

ಪ್ರಸ್ತುತ, ಭಾರತೀಯ ಹವಾಮಾನ ಇಲಾಖೆಯ ಬೆಳಗ್ಗೆ 11.30ರ ಬುಲೆಟಿನ್ ಪ್ರಕಾರ, ಚಂಡಮಾರುತವು ಚೆನ್ನೈನ ಆಗ್ನೇಯಕ್ಕೆ 450 ಕಿ.ಮೀ ಮತ್ತು ಪುದುಚೇರಿಯ ಪೂರ್ವ - ಆಗ್ನೇಯಕ್ಕೆ 410 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ತಿಳಿದು ಬಂದಿದೆ. ಇನ್ನು ಚೆನ್ನೈನಲ್ಲಿ ರಾತ್ರಿಯಿಡೀ ಸುಮಾರು 8 ಸೆಂ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ.

ಚಂಡಮಾರುತವು ಬುಧವಾರದೊಳಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಇಲಾಖೆಯ ಪ್ರಕಾರ ಕರಾವಳಿ ಪ್ರದೇಶಗಳ ಸುತ್ತಲಿನ ಗಾಳಿಯ ವೇಗ 95 ಕಿ.ಮೀ ನಿಂದ 110 ಕಿ.ಮೀನಷ್ಟು ಇರಲಿದೆ. ಇನ್ನು ತಮಿಳುನಾಡು ಮತ್ತು ಪುದುಚೇರಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದ್ದು, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಕಡಲೂರು, ಕರೈಕ್ಕಲ್, ನಾಗಪಟ್ಟಣಂ, ವಿಲ್ಲುಪುರಂ, ಕಾಂಚೀಪುರಂನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಮಧ್ಯೆ ಡೆಲ್ಟಾ ಜಿಲ್ಲೆಗಳಾದ ತಿರುವರೂರು, ತಂಜಾವೂರು, ತಿರುಚ್ಚಿ, ಪುದುಕೊಟ್ಟೈನಲ್ಲೀ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.