ಅಗರ್ತಲಾ (ತ್ರಿಪುರ): ತೃಣಮೂಲ ಕಾಂಗ್ರೆಸ್ ಸಂಸದೆ ಸುಶ್ಮಿತಾ ದೇವ್ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅವರ ಕಾರು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 1:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
-
People of #Tripura will give a befitting response to this BARBARIC ATTACK!
— AITC Tripura (@AITC4Tripura) October 22, 2021 " class="align-text-top noRightClick twitterSection" data="
Police must immediately stop acting as mere spectators. This collapse of law and order is unacceptable. WE DEMAND JUSTICE!#ShameOnBJP pic.twitter.com/700tdmRBM8
">People of #Tripura will give a befitting response to this BARBARIC ATTACK!
— AITC Tripura (@AITC4Tripura) October 22, 2021
Police must immediately stop acting as mere spectators. This collapse of law and order is unacceptable. WE DEMAND JUSTICE!#ShameOnBJP pic.twitter.com/700tdmRBM8People of #Tripura will give a befitting response to this BARBARIC ATTACK!
— AITC Tripura (@AITC4Tripura) October 22, 2021
Police must immediately stop acting as mere spectators. This collapse of law and order is unacceptable. WE DEMAND JUSTICE!#ShameOnBJP pic.twitter.com/700tdmRBM8
12 ದಿನಗಳ ರಾಜ್ಯಮಟ್ಟದ ಕಾರ್ಯಕ್ರಮ 'ತ್ರಿಪುರಾರ್ ಜೊನ್ನೊ ತೃಣಮೂಲ (ತ್ರಿಪುರಾಕ್ಕೆ ತೃಣಮೂಲ)' ದ ಭಾಗವಾಗಿ ದೇವ್ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಪಕ್ಷದ ಮೂಲ ಧ್ಯೇಯ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೃಷ್ಟಿಕೋನ, ಯೋಜನೆಗಳ ಬಗ್ಗೆ ಸಾರಲು ಅವರು ಈ ಪ್ರವಾಸ ಕೈಗೊಂಡಿದ್ದಾರೆ. ಈ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸುಶ್ಮಿತಾ ದೇವ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಉಡುಪಿ : ಇಬ್ಬರು ನಕ್ಸಲ್‌ವಾದಿಗಳ ಬಂಧನಕ್ಕೆ ವಾರಂಟ್
ಸುಶ್ಮಿತಾ ಅವರ ಮೇಲಿನ ಹಲ್ಲೆಯ ವಿಡಿಯೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಿವೆ. ಅಲ್ಲದೇ, ದುಷ್ಕರ್ಮಿಗಳು ಅವರ ಕಾರನ್ನೂ ಧ್ವಂಸಗೊಳಿಸಿದ್ದಾರೆ. ಘಟನೆಯ ಬಳಿಕ ಟ್ವೀಟ್ ಮಾಡಿರುವ ಎಐಟಿಸಿ ತ್ರಿಪುರಾ, ಈ ಮಾರಣಾಂತಿಕ ದಾಳಿಗೆ ತ್ರಿಪುರಾದ ಜನತೆ ಸೂಕ್ತ ಉತ್ತರ ಕೊಡ್ತಾರೆ. ಪೊಲೀಸರು ಪ್ರೇಕ್ಷಕರಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಶೇಮ್ ಆನ್ ಬಿಜೆಪಿ ಎಂದು ಉಲ್ಲೇಖಿಸಿದೆ.