ಕೋಲ್ಕತ್ತಾ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆಂದು ವೈದ್ಯಕೀಯ ಮೂಲಗಳು ಮಾಹಿತಿ ನೀಡಿವೆ.
31 ವರ್ಷದ ಟಿಎಂಸಿ ಸಂಸದೆ ಆಗಸ್ಟ್ 25ರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದು, ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಪತಿ ನಿಖಿಲ್ ಜೈನ್ನಿಂದ ವಿಚ್ಛೇಧನ ಪಡೆದುಕೊಂಡಿದ್ದ ನಟಿ, ನಂತರ ಗೆಳೆಯ, ನಟ ಯಶ್ದಾಸ್ ಗುಪ್ತಾ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಆದರೆ ಇವರು ಮದುವೆ ಮಾಡಿಕೊಂಡಿರಲಿಲ್ಲ.
2019ರಲ್ಲಿ ಉದ್ಯಮಿ ನಿಖಿಲ್ ಜೈನ್(ಟರ್ಕಿ) ಜೊತೆ ನುಸ್ರತ್ ಜಹಾನ್ ವಿವಾಹವಾಗಿದ್ದು. ಇದಾದ ಬಳಿಕ ಇಬ್ಬರ ಜೀವನದಲ್ಲಿ ಕೆಲವೊಂದು ಮನಸ್ತಾಪಗಳು ಹುಟ್ಟುಕೊಂಡಿದ್ದ ಕಾರಣ ವಿಚ್ಛೇಧನ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಇದಾದ ಬಳಿಕ ನಟ ಯಶ್ದಾಸ್ ಜೊತೆ ಡೇಟಿಂಗ್ ನಡೆಸಲು ಶುರು ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಸಂಸದೆಯ ಬೇಬಿ ಬಂಪ್ ಫೋಟೋಗಳು ವೈರಲ್ ಆಗಿದ್ದವು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಗುರಿಯಾಗಿದ್ದರು.
-
Congratulations @nusratchirps wish could hug in personal.
— Mimssi (@mimichakraborty) August 26, 2021 " class="align-text-top noRightClick twitterSection" data="
Love and hugs
">Congratulations @nusratchirps wish could hug in personal.
— Mimssi (@mimichakraborty) August 26, 2021
Love and hugsCongratulations @nusratchirps wish could hug in personal.
— Mimssi (@mimichakraborty) August 26, 2021
Love and hugs
ಇದನ್ನೂ ಓದಿರಿ: ಟಿಎಂಸಿ ಸಂಸದೆ ನುಸ್ರತ್ ಬೇಬಿ ಬಂಪ್ ಫೋಟೊ ವೈರಲ್...
ಆಸ್ಪತ್ರೆಯಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿರುವ ನುಸ್ರತ್ ಜಹಾನ್ಗೆ ರಾಜಕಾರಣಿ ಮಿಮಿ ಚಕ್ರವರ್ತಿ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.