ETV Bharat / bharat

'ನನಗೆ ಕಾಳಿ ಮಾತೆ ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆ': ಟಿಎಂಸಿ ಸಂಸದೆ ವಿವಾದಿತ ಹೇಳಿಕೆ - ಕಾಳಿ ಪೋಸ್ಟರ್ ಬಗ್ಗೆ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ

ವಿವಾದಾತ್ಮಕ ಕಾಳಿ ಮಾತೆ ಪೋಸ್ಟರ್​ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿದ್ದಾರೆ.

TMC MP Mahua Moitra
TMC MP Mahua Moitra
author img

By

Published : Jul 5, 2022, 5:49 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನನಗೆ ಕಾಳಿ ಮಾತೆ ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಚಿತ್ರ ನಿರ್ಮಾಪಕಿ,ನಟಿ ಲೀನಾ ಮಣಿಮೇಕಲೈ ಕಾಳಿ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ವಿವಾದಿತ ಫೋಟೋ ವೈರಲ್ ಮಾಡಿರುವ ಬೆನ್ನಲ್ಲೇ ಸಂಸದೆ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ನಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಅದಕ್ಕೆ ಯಾರೂ ಸಹ ಆಕ್ಷೇಪ ವ್ಯಕ್ತಪಡಿಸಬಾರದು. ಕೆಲವೊಂದು ಸ್ಥಳಗಳಲ್ಲಿ ದೇವರಿಗೆ ವಿಸ್ಕಿ ಅರ್ಪಣೆ ಮಾಡಲಾಗ್ತದೆ, ಜೊತೆಗೆ ಕೆಲವೊಂದು ಪ್ರದೇಶಗಳಲ್ಲಿ ಮಾಂಸ ಕೂಡ ನೈವೇದ್ಯ ರೀತಿಯಲ್ಲಿ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿರಿ: ವಿವಾದಾತ್ಮಕ ಕಾಳಿ ಮಾತೆ ಪೋಸ್ಟರ್​... ನಿರ್ಮಾಪಕಿ ಲೀನಾ ವಿರುದ್ಧ ದೂರು ದಾಖಲು

ನೀವು ಸಿಕ್ಕಿಂ ಮತ್ತು ಭೂತಾನ್​ಗೆ ಹೋದರೆ ಅಲ್ಲಿನ ಜನರು ಬೆಳಗ್ಗೆ ಪೂಜೆ ಮಾಡುವಾಗ ದೇವರಿಗೆ ವಿಸ್ಕಿ ನೀಡುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲಿ ಅದನ್ನ ತಿರಸ್ಕಾರ ಮಾಡಲಾಗುತ್ತದೆ. ದೇವರನ್ನ ಪೂಜೆ ಮಾಡುವ ಸ್ವಾತಂತ್ರ್ಯ ಅವರ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಪ್ರಕಾರ ಕಾಳಿ ಮಾತೆ ಮದ್ಯ ಸೇವಿಸುವ ಹಾಗೂ ಮಾಂಸ ತಿನ್ನುವ ದೇವತೆಯಾಗಿದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ.

ಲೀನಾ ಮಣಿಮೇಕಲೈ ಶೇರ್ ಮಾಡಿರುವ ಫೋಟೋದಲ್ಲಿ ಕಾಳಿ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ತಾರೆ ಕೈಯಲ್ಲಿ ಸಿಗರೇಟು ಹಿಡಿದುಕೊಂಡಿದ್ದಾರೆ. ಸಮುದಾಯವೊಂದರ ಧ್ವಜ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜೊತೆಗೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.