ETV Bharat / bharat

ತಿರುಪತಿ ತಿಮ್ಮಪ್ಪನ ಹೆಸರಲ್ಲಿದೆ 2 ಲಕ್ಷ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ! - ತಿರುಪತಿ ತಿಮ್ಮಪ್ಪ

ರಾಜ್ಯ ಸರ್ಕಾರದ ಸೆಕ್ಯುರಿಟೀಸ್ ಬಾಂಡ್‌ಗಳಲ್ಲಿ ಟಿಟಿಡಿ ಹೂಡಿಕೆ ಮಾಡಿಲ್ಲ. ಬಡ್ಡಿ ಹೆಚ್ಚಿರುವ ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ಮಾತ್ರ ಠೇವಣಿ ಇಡಲಾಗುತ್ತಿದೆ ಎಂದು ಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ.

Thirupathi temple
ತಿರುಪತಿ ದೇವಾಲಯ
author img

By

Published : Nov 6, 2022, 1:12 PM IST

Updated : Nov 6, 2022, 1:51 PM IST

ತಿರುಪತಿ (ಆಂಧ್ರ ಪ್ರದೇಶ): ಈ ವರ್ಷದ ಸೆಪ್ಟೆಂಬರ್ ಅಂತ್ಯದವರೆಗೆ ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ಒಟ್ಟು 15,938.68 ಕೋಟಿ ರೂ ನಗದು ಠೇವಣಿ ಇಡಲಾಗಿದೆ. ಅದರ ಜೊತೆಗೆ ವಿವಿಧ ಬ್ಯಾಂಕ್​ಗಳಲ್ಲಿ 10,258.37 ಕೆಜಿ (10 ಟನ್) ಚಿನ್ನವನ್ನು ಕೂಡ ಇಡಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.

"ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಯಾವ ಬ್ಯಾಂಕ್​ಗಳಲ್ಲಿ ಹೆಚ್ಚಿನ ಬಡ್ಡಿದರ ನೀಡುತ್ತಾರೋ ಆ ಬ್ಯಾಂಕ್​ಗಳಲ್ಲಿ ಠೇವಣಿ ಮಾಡುತ್ತಿದ್ದೇವೆ. ಬ್ಯಾಂಕ್‌ಗಳಲ್ಲಿ ನಗದು ಮತ್ತು ಚಿನ್ನವನ್ನು ಠೇವಣಿ ಮಾಡಲು, ಅರ್ಹ ಶೆಡ್ಯೂಲ್ಡ್ ಬ್ಯಾಂಕ್‌ಗಳು ಮತ್ತು ಸಂಸ್ಥೆಗಳಿಂದ ಕೊಟೇಷನ್​ಗಳನ್ನು ಆಹ್ವಾನಿಸಲಾಗಿದೆ" ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ತಿಳಿಸಿದರು.

ಯಾವ ಸರ್ಕಾರಕ್ಕೂ ಹಣ ನೀಡಿಲ್ಲ: ಇದುವರೆಗೆ ಯಾವುದೇ ಸರ್ಕಾರಕ್ಕೆ ಟಿಟಿಡಿಯಿಂದ ಹಣ ನೀಡಿಲ್ಲ. ಹೀಗೆ ನೀಡಿದ ಇತಿಹಾಸವೂ ಇಲ್ಲ, ಮುಂದೆಯೂ ನೀಡುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಡೆದ 'ಡಯಲ್ ಟಿಟಿಡಿ ಇಒ' ಕಾರ್ಯಕ್ರಮದಲ್ಲಿ ಭಕ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಅಧ್ಯಕ್ಷರು ಹಾಗೂ ಟಿಟಿಡಿ ಮೇಲೆ ಕೆಲವರು ಕೆಸರೆರಚಲು ಯತ್ನಿಸುತ್ತಿದ್ದಾರೆ. ಟಿಟಿಡಿ ಅಧ್ಯಕ್ಷರು, ಆಡಳಿತ ಮಂಡಳಿ, ಅಧಿಕಾರಿಗಳು ಇದುವರೆಗೂ ಯಾವುದೇ ತಪ್ಪು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಟಿಟಿಡಿ ಯಾವತ್ತೂ ರಾಜ್ಯ ಸರ್ಕಾರದ ಸೆಕ್ಯುರಿಟೀಸ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿಲ್ಲ. ಬಡ್ಡಿ ಹೆಚ್ಚಿರುವ ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ಮಾತ್ರ ಠೇವಣಿ ಇಡಲಾಗುತ್ತಿದೆ" ಎಂದರು.

ತಿರುಪತಿ ತಿಮ್ಮಪ್ಪನ ಹೆಸರಲ್ಲಿ 2.25 ಲಕ್ಷ ಕೋಟಿ ರೂ ಆಸ್ತಿ: ನಗದು, ಚಿನ್ನಾಭರಣ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿರುವ ತಿರುಮಲ ದೇವರ ಆಸ್ತಿ ಮೌಲ್ಯ ಸುಮಾರು 2.25 ಲಕ್ಷ ಕೋಟಿ ರೂ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಟಿಟಿಡಿ ಮಂಡಳಿ ದೇಶದ ನಾನಾ ಭಾಗಗಳಲ್ಲಿ ಕೃಷಿಭೂಮಿ, ಫ್ಲ್ಯಾಟ್​ಗಳು ಹಾಗೂ ಕಟ್ಟಡಗಳು ಸೇರಿ ಒಟ್ಟು 960 ಆಸ್ತಿಗಳನ್ನು ಹೊಂದಿದೆ ಎಂಬ ವಿಚಾರ ಶ್ವೇತಪತ್ರದಲ್ಲಿದೆ.

ಇವುಗಳ ಮೌಲ್ಯ 75 ಸಾವಿರ ಕೋಟಿ ರೂ. ಇದು ಕೇವಲ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೌಲ್ಯ. ಮಾರುಕಟ್ಟೆ ಮೌಲ್ಯ ಎರಡೂವರೆಯಿಂದ ಮೂರು ಪಟ್ಟು ಹೆಚ್ಚು ಅಂದರೆ ರೂ.1.87 ಲಕ್ಷ ಕೋಟಿಯಿಂದ ರೂ.2.10 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ತಿರುಮಲ ದೇವಸ್ಥಾನದ ಆಭರಣಗಳ ಜೊತೆಗೆ ವಿವಿಧ ಪ್ರದೇಶಗಳಲ್ಲಿನ ದೇವಾಲಯಗಳಲ್ಲಿನ ಪುರಾತನ, ಅಮೂಲ್ಯ ಆಭರಣಗಳು ಮತ್ತು ವಜ್ರಗಳನ್ನು ಒಳಗೊಂಡ ಆಭರಣಗಳ ತೂಕ 250 ಕೆ.ಜಿ. ಇದೆ. ದೊಡ್ಡ ಪ್ರಮಾಣದಲ್ಲಿ ಬೆಳ್ಳಿಯೂ ಇದ್ದು, ಆಸ್ತಿ, ಚಿನ್ನಾಭರಣ, ನಗದು, ಚಿನ್ನದ ಠೇವಣಿ ಎಲ್ಲದರ ಮೌಲ್ಯ 2.25 ಲಕ್ಷ ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಾವಿರಾರು ಕೋಟಿ ಒಡೆಯ, ಹತ್ತಾರು ಟನ್​ ಚಿನ್ನದ ಮಾಲೀಕ.. ತಿರುಪತಿ ತಿಮ್ಮಪ್ಪನ ಆಸ್ತಿ ಬಹಿರಂಗ

Last Updated : Nov 6, 2022, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.