ಲಂಡನ್, ಬ್ರಿಟನ್: ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ಕುರುಹಗಳು ಬ್ರಿಟನ್ನಲ್ಲಿವೆ. ಅಲ್ಲಿನ ಹರಾಜಿನಲ್ಲಿರುವ ಟಿಪ್ಪು ಕಾಲಕ್ಕೆ ಸಂಬಂಧಿಸಿದ 10 ಮೀಟರ್ ಅಗಲದ ವರ್ಣಚಿತ್ರವೊಂದನ್ನು ಬುಧವಾರ ಸೋಥೆಬಿಸ್‌ನಲ್ಲಿ ಹರಾಜಿಗೆ ಇಡಲಾಗಿದೆ. 'ಬದುಕುಳಿದಿರುವ ವಸಾಹತುಶಾಹಿ ಸೋತಿರುವ ಶ್ರೇಷ್ಠ ಭಾರತೀಯ ಚಿತ್ರ' ಎಂಬುದಾಗಿ ಈ ವರ್ಣಚಿತ್ರವನ್ನು ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಬಣ್ಣಿಸಿದ್ದರು ಎಂಬುದು ವಿಶೇಷ.
'ಆರ್ಟ್ಸ್ ಆಫ್ ದಿ ಇಸ್ಲಾಮಿಕ್ ವರ್ಲ್ಡ್ & ಇಂಡಿಯಾ' ಎಂಬ ಹೆಸರಿನಲ್ಲಿ ಹರಾಜು ನಡೆಯುತ್ತಿದ್ದು, ಈ ವರ್ಣಚಿತ್ರವೇ ಹರಾಜಿನ ಕೇಂದ್ರ ಬಿಂದುವಾಗಿದೆ. ಈ ವರ್ಣಚಿತ್ರದ ಮೌಲ್ಯ 5ರಿಂದ 8 ಕೋಟಿ ರೂಪಾಯಿಯಾಗಿದ್ದು, ಎರಡನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಗೆದ್ದ ಕಾರಣದಿಂದಾಗಿ ಮೂರು ವರ್ಣಚಿತ್ರಗಳನ್ನು ರಚಿಸಲಾಗಿತ್ತು. ಅವುಗಳಲ್ಲಿ ಒಂದು ವರ್ಣಚಿತ್ರವನ್ನು 2010 ರಲ್ಲಿ ಸೋಥೆಬಿಸ್‌ನಲ್ಲಿ 769,250 ಫೌಂಡ್ಗೆ ಮಾರಾಟ ಮಾಡಲಾಗಿತ್ತು.
-
Mysorean troops surrounding the British at the Battle of Polilur (1780). This 200 year old painting is almost 10 metres long & is loaded with details… (1/6)
— Dr Jennifer Howes (@jhowesuk) March 27, 2022 " class="align-text-top noRightClick twitterSection" data="
 pic.twitter.com/G9z1AfY1T6
">Mysorean troops surrounding the British at the Battle of Polilur (1780). This 200 year old painting is almost 10 metres long & is loaded with details… (1/6)
— Dr Jennifer Howes (@jhowesuk) March 27, 2022
 pic.twitter.com/G9z1AfY1T6Mysorean troops surrounding the British at the Battle of Polilur (1780). This 200 year old painting is almost 10 metres long & is loaded with details… (1/6)
— Dr Jennifer Howes (@jhowesuk) March 27, 2022
 pic.twitter.com/G9z1AfY1T6
1780ರಲ್ಲಿ ನಡೆದ ಎರಡನೇ ಆಂಗ್ಲೋ-ಮೈಸೂರು ಯುದ್ಧವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಮೈಸೂರಿನ ಆಡಳಿತಗಾರ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪುವಿನ ಜಯ ಸಾಧಿಸಿದ್ದರು. ಈ ಯುದ್ಧದಲ್ಲಿ ಪೋಲಿಲೂರ್ ಕದನ ನಡೆದಿದ್ದು, ಆ ಕದನದ ಬಗ್ಗೆ ಈ ವರ್ಣಚಿತ್ರದಲ್ಲಿ ವಿವರಣೆ ನೀಡಲಾಗಿದೆ. ಬ್ರಿಟಿಷ್ ಸೇನೆಯನ್ನು ಮೈಸೂರಿನ ಪಡೆಗಳು ಸುತ್ತುವರೆದಿರುವುದು ಈ ವರ್ಣಚಿತ್ರದಲ್ಲಿ ಕಂಡುಬರುತ್ತದೆ. ಟಿಪ್ಪು ಮತ್ತು ಹೈದರ್ ಅಲಿ ಇಬ್ಬರೂ ಈ ಕದನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಟಿಪ್ಪು ಆನೆಯ ಮೇಲೆ ಗುಲಾಬಿ ಹಿಡಿದುಕೊಂಡಿರುವುದು ಗೊತ್ತಾಗುತ್ತದೆ.
ಮೈಸೂರಿನ ಪಡೆಗಳು ಅತ್ಯಂತ ಹೆಚ್ಚಾಗಿದ್ದು, ಎರಡು ಕಡೆಗಳಿಂದ ಶಸ್ತ್ರ ಸಜ್ಜಿತ ಬ್ರಿಟೀಷರನ್ನು ಸುತ್ತುವರೆಯಲಾಗಿದೆ. ಮತ್ತೊಂದೆಡೆ ನದಿಯಿದ್ದಂತೆ ಕಾಣುತ್ತಿದೆ. ಯುದ್ಧದಲ್ಲಿ ಗಾಯಗೊಂಡ ಸ್ಕಾಟಿಷ್ ಅಧಿಕಾರಿ, ಕರ್ನಲ್ ವಿಲಿಯಂ ಬೈಲ್ಲಿ ಅವರನ್ನು ಪಲ್ಲಕ್ಕಿಯಲ್ಲಿ ಸಾಗಿಸುವುದನ್ನು ಕಾಣಬಹುದಾಗಿದೆ. ಯುದ್ಧದಲ್ಲಿ ಕೊಲೆಯಾದ, ಶಿರಚ್ಛೇದನವಾದ ದೇಹಗಳನ್ನು ಸೇರಿದಂತೆ ಯುದ್ಧದ ಘರ್ಷಣೆಯನ್ನು ಈ ವರ್ಣಚಿತ್ರದಲ್ಲಿ ಬಿಂಬಿಸಲಾಗಿದೆ.
-
On the Mysorean side, Haidar Ali & his son Tipu Sultan are on the left. In the top right corner, Commander Lally of the French troops watches the action through a telescope.(2/6) pic.twitter.com/s3aKszSiAL
— Dr Jennifer Howes (@jhowesuk) March 27, 2022 " class="align-text-top noRightClick twitterSection" data="
">On the Mysorean side, Haidar Ali & his son Tipu Sultan are on the left. In the top right corner, Commander Lally of the French troops watches the action through a telescope.(2/6) pic.twitter.com/s3aKszSiAL
— Dr Jennifer Howes (@jhowesuk) March 27, 2022On the Mysorean side, Haidar Ali & his son Tipu Sultan are on the left. In the top right corner, Commander Lally of the French troops watches the action through a telescope.(2/6) pic.twitter.com/s3aKszSiAL
— Dr Jennifer Howes (@jhowesuk) March 27, 2022
ಟಿಪ್ಪು ಸುಲ್ತಾನ್ ಬಹುಶಃ ಈಸ್ಟ್ ಇಂಡಿಯಾ ಕಂಪನಿ ಎದುರಿಸಿದ ಅತ್ಯಂತ ಪ್ರಬಲ ಆಡಳಿತಗಾರ. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಭಾರತೀಯರ ವಿರುದ್ಧ ಹೋರಾಡಬಹುದು, ಅವರನ್ನು ಗೆಲ್ಲಬಹುದು. ಯೂರೋಪಿಯನ್ನರ ಎಲ್ಲ ತಂತ್ರಗಳನ್ನು ಬಳಸಿ, ಯೂರೋಪಿಯನ್ನರನ್ನು ಸೋಲಿಸಬಹುದು ಎಂದು ತೋರಿಸಿಕೊಂಡಿಟ್ಟಿದ್ದಾನೆ. ಎರಡನೇ ಆಂಗ್ಲೋ ಮೈಸೂರು ಯುದ್ಧದ ಪೊಲ್ಲಿಲೂರ್ ಕದನದಲ್ಲಿ ಮೊದಲ ಬಾರಿಗೆ ಯೂರೋಪಿಯನ್ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಲಾಗಿದೆ ಎಂದು ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಹೇಳಿದ್ದಾರೆ.
ಇದನ್ನೂ ಓದಿ: ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ನಿರೂಪಕನ ಕಪಾಳಕ್ಕೆ ಹೊಡೆದದ್ದೇಕೆ?