ETV Bharat / bharat

'ಕೃಷಿ ಆಮದಿನ ಮೇಲೆ ಭಾರತದ ಅವಲಂಬನೆ ತಪ್ಪಬೇಕಿದೆ'

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ ಎಂಬ ನಕಲಿ ತೃಪ್ತಿಯಿಂದ ಭಾರತ ಹೊರಬರಬೇಕು. ಕೃಷಿ ಹಸಿರು ರಾಷ್ಟ್ರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರೈತರಿಗೆ ದೇಶ ಬೆಂಬಲ ನೀಡುವ ಸಮಯ ಬಂದಿದೆ. ಆಹಾರದ ಬಿಕ್ಕಟ್ಟಿನಲ್ಲಿ ಸಿಲುಕಿದರೆ ಭಾರತದಷ್ಟು ದೊಡ್ಡ ಗಾತ್ರ ಮತ್ತು ಜನಸಂಖ್ಯೆಯ ದೇಶಕ್ಕೆ ಯಾವ ದೇಶ ಸಹಾಯ ಮಾಡಲು ಸಾಧ್ಯವಿಲ್ಲ.

time-to-overcome-indias-dependence-on-farm-imports

author img

By

Published : Mar 10, 2021, 7:33 PM IST

ಹೈದರಾಬಾದ್: ಬಡ ಮತ್ತು ಮಧ್ಯಮ ವರ್ಗದವರ ಜೀವನದ ಮೇಲೆ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಬೆಲೆಯಲ್ಲಿನ ತೀವ್ರ ಏರಿಕೆ ಕೆಟ್ಟ ಹೊಡೆತ ಕೊಟ್ಟಿದೆ. ಅಡುಗೆ ತೈಲ ದವಸ ಧಾನ್ಯ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವುದು ಗೃಹಿಣಿಯರ ಕಣ್ಣಲ್ಲಿ ನೀರು ತರಿಸುತ್ತಿವೆ, ಮನೆಯ ಆಯವ್ಯಯವನ್ನು ತಲೆಕೆಳಗು ಮಾಡುತ್ತಿವೆ.

ಕಳೆದ ವರ್ಷದ ಅಕ್ಟೋಬರ್‌ ಬೆಲೆ ಸೂಚ್ಯಂಕಕ್ಕೆ ಹೋಲಿಸಿದರೆ ಈ ವರ್ಷ ಅಗತ್ಯ ವಸ್ತುಗಳ ಬೆಲೆಗಳು ನಿಯಂತ್ರಣದಲ್ಲಿ ಇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪೆಟ್ರೋಲಿಯಂ ಇಂಧನ ಬೆಲೆಯ ಏರಿಳಿತದ ಪರಿಣಾಮ ಉಳಿದ ಬೆಲೆಗಳ ಏರಿಕೆಗೆ ರೆಕ್ಕೆಪುಕ್ಕ ನೀಡಿದೆ. ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ 150 ರೂ ದಾಟಿದ್ದರೆ, ತೊಗರಿ ಬೇಳೆ ದರ ಕೆ.ಜಿ.ಗೆ 100 ರೂ ಮುಟ್ಟಿದೆ. ಹುಣಸೆ ಹಣ್ಣಿನ ದರವೂ ಊರ್ಧ್ವಮುಖಿಯಾಗಿ ಚಲಿಸುತ್ತಿದೆ. ಈ ವಿದ್ಯಮಾನ ಜನರ ಖರೀದಿ ಅವಕಾಶಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಿದೆ.

ಅಗತ್ಯ ವಸ್ತುಗಳ ಬೆಲೆ ಒಂದು ತಿಂಗಳ ಅವಧಿಯಲ್ಲಿ ಶೇಕಡಾ 37 ರಷ್ಟು ಏರಿಕೆಯಾಗಿದೆ. ಪೆಟ್ರೋಲಿಯಂ ಶುಲ್ಕದ ಹೆಚ್ಚಳದಿಂದಾಗಿ ಖಾದ್ಯ ತೈಲದ ಮೇಲಿನ ಆಮದು ಸುಂಕ ಇಳಿಕೆಯನ್ನು ಕಡಿತಗೊಳಿಸಿದ್ದು ಕೇವಲ ಒಂದು ತಿಂಗಳಲ್ಲಿ ಅವುಗಳ ಬೆಲೆಯಲ್ಲಿ ಶೇ 35ರಷ್ಟು ಏರಿಕೆ ಉಂಟಾಗಿದೆ.

ಮ್ಯಾನ್ಮಾರ್‌ನಲ್ಲಿನ ರಾಜಕೀಯ ಬಿಕ್ಕಟ್ಟು ಭಾರತದ ಉದ್ದಿನ ಬೇಳೆ ಆಮದಿನ ಮೇಲೆ ತೀವ್ರ ಪರಿಣಾಮ ಬೀರಿದೆ. ಇದು ಮನೆಯ ಇಡ್ಲಿ ಮತ್ತು ದೋಸೆಯ ವೆಚ್ಚ ಹೆಚ್ಚಳದ ಸ್ಥಿತಿಗೆ ಇಂಬು ನೀಡಿದೆ. ಭಾರತದ ಶೇ 70 ರಷ್ಟು ಖಾದ್ಯ ತೈಲ ಅವಶ್ಯಕತೆಗಳು ಈಡೇರುತ್ತಿರುವುದು ಆಮದು ಮೂಲಕ. ಇಂಡೋನೇಷ್ಯಾ ಮತ್ತು ಮಲೇಷ್ಯಾದ ತಾಳೆ ಹೊಲಗಳಲ್ಲಿ ಕಾರ್ಮಿಕರ ಕೊರತೆ ಮತ್ತು ಸೋಯಾಬಿನ್‌ ಉತ್ಪಾದಿಸುವ ಅರ್ಜೆಂಟೀನಾದಲ್ಲಿನ ಬರಗಾಲದಿಂದಾಗಿ ಬಾಹ್ಯ ಶಕ್ತಿಗಳ ಮೇಲೆ ಸಂಪೂರ್ಣಅವಲಂಬಿತವಾಗಿರುವ ನಮ್ಮ ದೇಶ ಹೆಚ್ಚಿನ ಬೆಲೆ ತೆರುತ್ತಿದೆ. ಉಕ್ರೇನ್‌ನಲ್ಲಿ ಕಡಿಮೆಯಾದ ಸೂರ್ಯಕಾಂತಿ ಇಳುವರಿ ಭಾರತದ ಖಾದ್ಯ ತೈಲ ಆಮದಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಅಮೆರಿಕ (ಯು.ಎಸ್ಎ.) ನಂತರ, ವಿಶ್ವದಲ್ಲೇ ಅತಿ ದೊಡ್ಡ ಕೃಷಿ ಭೂಮಿ ಹೊಂದಿರುವ ದೇಶ ಭಾರತ. ಆದರೂ ಇದು ಖಾದ್ಯ ತೈಲ ಮತ್ತು ಬೇಳೆಕಾಳುಗಳಂತಹ ವಸ್ತುಗಳಿಗೆ ಸಣ್ಣ ದೇಶಗಳ ಮೇಲೆ ಅವಲಂಬಿತವಾಗಿದೆ. ಆಹಾರ ಅಗತ್ಯಗಳಿಗಾಗಿ ಬಾಹ್ಯ ಶಕ್ತಿಗಳನ್ನು ಅವಲಂಬಿಸಿರುವ ದೇಶವು ಆತ್ಮ ನಿರ್ಭರತೆಯನ್ನು( ಸ್ವಾವಲಂಬನೆ ) ಹೇಗೆ ಸಾಧಿಸಲು ಸಾಧ್ಯ?

ಭಾರತ ಶೇಕಡಾ 80 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತ ಇದೆ. ನೈಸರ್ಗಿಕ ದತ್ತಿಗಳ ನಿರ್ಬಂಧದ ಹಿನ್ನೆಲೆಯಲ್ಲಿ ಇದನ್ನು ಅರ್ಥೈಸಿಕೊಳ್ಳಬಹುದು. ಕೃಷಿ ರಾಷ್ಟ್ರವೆಂದು ದೇಶ ಹೆಮ್ಮೆಪಡುತ್ತಿದ್ದು ಈ ದೇಶದ ರೈತರು ಮಣ್ಣಿನಿಂದ ಚಿನ್ನ ತೆಗೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಮಾತುಗಳ ಮಧ್ಯೆ ಆಹಾರ ಪದಾರ್ಥ ಆಮದನ್ನು ನಾವು ಹೇಗೆ ಸಮರ್ಥನೆ ಮಾಡಿಕೊಳ್ಳಬಹುದು?

1961 ರಲ್ಲಿ ಜಾಗತಿಕ ಖಾದ್ಯ ತೈಲಗಳ ಆಮದಿನಲ್ಲಿ ಭಾರತದ ಪಾಲು ಶೇ. 0.9ರಷ್ಟಿತ್ತು. 2019ರ ಹೊತ್ತಿಗೆ, ಈ ಪ್ರಮಾಣ ವಿಶ್ವವ್ಯಾಪಿ ಆಮದಿನ ಶೇ. 12 ಕ್ಕ ಏರಿತು. ಖಾದ್ಯ ತೈಲ ಆಮದಿಗಾಗಿ ದೇಶ 65,000 ಕೋಟಿ ರೂ.ಗಳಿಂದ 70,000 ಕೋಟಿ ರೂ. ವಿನಿಯೋಗಿಸುತ್ತಿದೆ. ಇತ್ತ ಕೃಷಿ ಕಾಯಿದೆಗಳು ಭಾರತದ ಕೃಷಿ ಸಾಮರ್ಥ್ಯ ಸುಧಾರಿಸುವ ಗುರಿ ಹೊಂದಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳುವಾಗ ಕೃಷಿ ಸಮುದಾಯ ಅದನ್ನು ನಂಬುತ್ತಿಲ್ಲ.

1.75 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ 10.75 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ದೇಶದ ರೈತರು ಸರ್ಕಾರದಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ರೈತರು ಸರ್ಕಾರದಿಂದ ನಿರೀಕ್ಷಿಸುತ್ತಿರುವುದು ವರ್ಷಪೂರ್ತಿ ದುಡಿದ ನಂತರ ಅವರು ಪಡೆಯುವ ಇಳುವರಿಗೆ ಗೌರವಯುತ ಬೆಲೆ. ಈಗಾಗಲೇ ಹಲವಾರು ರೈತರು ಕೃಷಿಯನ್ನು ಕೈಬಿಟ್ಟಿದ್ದಾರೆ. ಪರಿಣಾಮವಾಗಿ, ದೇಶದ ನಗರಗಳ ಸುತ್ತ ಇರುವ ಕೃಷಿಭೂಮಿ ರಿಯಲ್ ಎಸ್ಟೇಟ್ ಉದ್ಯಮವಾಗಿ ಬದಲಾಗುತ್ತಿವೆ.

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ ಎಂಬ ನಕಲಿ ತೃಪ್ತಿಯಿಂದ ಭಾರತ ಹೊರಬರಬೇಕು. ಕೃಷಿ ಹಸಿರು ರಾಷ್ಟ್ರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರೈತರಿಗೆ ದೇಶ ಬೆಂಬಲ ನೀಡುವ ಸಮಯ ಬಂದಿದೆ. ಆಹಾರದ ಬಿಕ್ಕಟ್ಟಿನಲ್ಲಿ ಸಿಲುಕಿದರೆ ಭಾರತದಷ್ಟು ದೊಡ್ಡ ಗಾತ್ರ ಮತ್ತು ಜನಸಂಖ್ಯೆಯ ದೇಶಕ್ಕೆ ಯಾವ ದೇಶ ಸಹಾಯ ಮಾಡಬಲ್ಲದು? ಅದಕ್ಕಾಗಿಯೇ ಆಹಾರ ಬೆಳೆಗಳನ್ನು ಬೆಳೆಸುವ ರೈತರನ್ನು ಬೆಂಬಲಿಸುವುದಕ್ಕಾಗಿ ಸಮಗ್ರ ರಾಷ್ಟ್ರೀಯ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಅದು ಮಾತ್ರ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.