ನವದೆಹಲಿ : ಮಹಿಳೆ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗುವ ಸಮಯ ಬಂದಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.
ಸುಪ್ರೀಂಕೋರ್ಟ್ ಯಾವಾಗಲೂ ಮಹಿಳೆಯರ ಹಿತಾಸಕ್ತಿ ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ ಮತ್ತು ಅದರ ಪ್ರತಿ ಕೊಲೆಜಿಯಂ ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಮಹಿಳೆಯರನ್ನು ಪರಿಗಣಿಸುತ್ತದೆ ಎಂದು ಸುಪ್ರೀಕೋರ್ಟ್ ಪ್ರತಿಪಾದಿಸಿದೆ.
ಜನವರಿ 26, 1950ರಂದು ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಸಿಜಿಐ ಆದ ಈವರೆಗೆ ಎನ್ ವಿ ರಮಣ ಸೇರಿದಂತೆ 48 ಮುಖ್ಯ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಒಬ್ಬ ಮಹಿಳಾ ನ್ಯಾಯಾಧೀಶರು ಹೆಸರು ಕೂಡ ಕಾಣಿಸಿಕೊಂಡಿಲ್ಲ. ಇನ್ನು, ಸ್ವಾತಂತ್ರ್ಯ ಬಂದಾಗಿನಿಂದ, ಕೇವಲ ಎಂಟು ಮಹಿಳಾ ನ್ಯಾಯಾಧೀಶರಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸೂರ್ಯ ಕಾಂತ್ ಅವರ ವಿಶೇಷ ನ್ಯಾಯಪೀಠ," ಒಬ್ಬ ಮಹಿಳೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಬೇಕಾದ ಕಾಲ ಬಂದಿದೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದೆ. "ನಾವು ಮಹಿಳೆಯರ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವರನ್ನೂ (ಮಹಿಳೆಯರನ್ನು) ಸಿಜೆಐ ಆಗಿ ನೇಮಕ ಮಾಡಲಾಗುವುದು ಎಂದು ನ್ಯಾಯಪೀಠ ಹೇಳಿದೆ.