ನವದೆಹಲಿ: ಜೈಲಾಧಿಕಾರಿಗಳ ಕೈಗೆ ಸಿಕ್ಕಿ ಬೀಳಬಹುದೆಂಬ ಭಯದಲ್ಲಿ ಕೈದಿಯೋರ್ವ ಮೊಬೈಲ್ ಫೋನ್ ನುಂಗಿರುವ ಘಟನೆ ತಿಹಾರ್ ಜೈಲಿನಲ್ಲಿ ನಡೆದಿದೆ. ಆತನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೈದಿಗಳ ಬಳಿ ಮೊಬೈಲ್ ಸೇರಿದಂತೆ ಇತರೆ ನಿಷೇಧಿತ ವಸ್ತುಗಳಿರುವ ಕುರಿತು ತನಿಖೆ ನಡೆಸಿದಾಗ ಕೈದಿಯೋರ್ವ ಈ ರೀತಿ ನಡೆದುಕೊಂಡಿದ್ದಾನೆ. ತನ್ನ ಬಳಿಯಿದ್ದ ಸಣ್ಣ ಮೊಬೈಲ್ ಫೋನ್ ಅನ್ನು ಆತ ತಕ್ಷಣ ನುಂಗಿದ್ದಾನೆ. ಜೈಲಿನ ವಾರ್ಡನ್ ಹಾಗೂ ಇತರೆ ಕೈದಿಗಳೆದುರು ಈ ಘಟನೆ ನಡೆಯಿತು. ತಕ್ಷಣವೇ ಆತನನ್ನು ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಬಳಿಕ ಆತನ ಆರೋಗ್ಯ ಮತ್ತಷ್ಟು ಹದಗೆಟ್ಟಿರುವ ಕಾರಣ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿ 24 ಗಂಟೆ ಕಳೆದರೂ, ಕೈದಿಯ ಹೊಟ್ಟೆಯೊಳಗಿರುವ ಮೊಬೈಲ್ ಫೋನ್ ಹೊರಬಂದಿಲ್ಲ. ಹಾಗಾಗಿ, ಶಸ್ತ್ರಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Bulli Bai App Case: ಪ್ರಮುಖ ಆರೋಪಿ ಬಂಧಿಸಿದ ದೆಹಲಿ ವಿಶೇಷ ಪೊಲೀಸ್ ದಳ