ಯೋಗಭ್ಯಾಸದ ಮೂಲಕ ವ್ಯಕ್ತಿಯು ಏನನ್ನು ಬೇಕಾದರೂ ಸಾಧಿಸಬಹುದು. ಏಕಾಗ್ರತೆ ಮೂಲಕ ಮನಸ್ಸು ಹತೋಟಿಯಲ್ಲಿಟ್ಟುಕೊಂಡು ಅಂದುಕೊಂಡದ್ದನ್ನು ಸಾಧಿಸಲು ಯೋಗ ಸಹಕಾರಿಯಾಗಿದೆ. ಯೋಗಾಭ್ಯಾಸ ಮಾಡುವ ವ್ಯಕ್ತಿ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದುವುದಿಲ್ಲ. ತಾಳ್ಮೆಯಿಂದ ಎಲ್ಲವನ್ನೂ ಸ್ವೀಕರಿಸಿ ಪರಿಹಾರ ಕಂಡುಕೊಳ್ಳುತ್ತಾನೆ.
ಮನಸ್ಸಿನ ದುಗುಡ ದೂರವಾಗಿಸಲು ಯೋಗ ಒಂದು ಅತ್ಯುತ್ತಮ ಪರಿಹಾರ. ಪಂಚೇಂದ್ರಿಯಗಳನ್ನು ನಿಯಂತ್ರಿಸಲು ಇದು ಸಹಕಾರಿ. ಚಂಚಲತೆಯಿಂದ ಕೂಡಿರುವ ಮನಸ್ಸನ್ನು ಆತ್ಮದೊಳಗೆ ಲೀನವಾಗಿಸಿ, ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು.
ಯೋಗವನ್ನು ಮೈಗೂಡಿಸಿಕೊಂಡವರು, ಬೇರೊಬ್ಬರಿಗೆ ಬೇಸರವನ್ನುಂಟು ಮಾಡಲ್ಲ. ಎಲ್ಲ ಜೀವಿಗಳಲ್ಲೂ ಸರ್ವೋತ್ತಮ ಆತ್ಮ ಕಾಣುತ್ತಾನೆ. ಮನಸ್ಸು ಹಿಡಿತಲ್ಲಿಟ್ಟುಕೊಂಡ ವ್ಯಕ್ತಿ ಎಲ್ಲೆಡೆ ದೇವರನ್ನು ಕಾಣುತ್ತಾನೆ. ಅವನಿಗೆ ದೇವರು ಎಂದಿಗೂ ಅಗೋಚರವಾಗುವುದಿಲ್ಲ ಎಂದು ಭಗವಾನ್ ಶ್ರೀ ಕೃಷ್ಣ ಹೇಳಿದ್ದಾನೆ.