ಸತಾರಾ( ಮಹಾರಾಷ್ಟ್ರ): ಬೀದಿ ನಾಯಿಗಳ ದಾಳಿಗೆ ಮೂರು ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಕರದ್ ಜಿಲ್ಲೆಯ ಜಗತಾಪ್ ವಸ್ತಿ ಪ್ರದೇಶದಲ್ಲಿ ನಡೆದಿದೆ. ದಾಳಿ ವೇಳೆ ಮೃತಪಟ್ಟ ಬಾಲಕನನ್ನು ರಾಜ್ವೀರ್ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಬಾಲಕನ ತಾಯಿ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದರು. ಎಂದಿನಂತೆ ಬಾಲಕ ಮನೆಯಿಂದ ಸ್ವಲ್ಪ ದೂರದಲ್ಲಿ ಆಟವಾಡಲು ಹೋಗಿದ್ದಾನೆ.
ಈ ವೇಳೆ, ಹನ್ನೆರಡು ಹದಿನೈದು ಬೀದಿ ನಾಯಿಗಳು ಏಕಾಏಕಿ ರಾಜವೀರ್ನ ಮೇಲೆ ದಾಳಿ ನಡೆಸಿವೆ. ಇದರಿಂದ ಬಾಲಕನಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಬಾಲಕನ ಮೃತ ದೇಹವನ್ನು ಆಸ್ಪತ್ರಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ತುಮಕೂರು: ತಂದೆ ಮಗನ ಮಧ್ಯೆ ಗಲಾಟೆ ಕೊಲೆಯಲ್ಲಿ ಅಂತ್ಯ!