ETV Bharat / bharat

Encounter: ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಮೂವರು ಉಗ್ರರ ಹತ್ಯೆ - ಶೋಪಿಯಾನ್‌ ಸೇನಾ ಕಾರ್ಯಾಚರಣೆ

ಶೋಪಿಯಾನ್‌ನಲ್ಲಿ ಪೊಲೀಸ್​ ಹಾಗೂ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿದೆ.

shopian encounter
ಮೂವರು ಉಗ್ರರ ಹತ್ಯೆ
author img

By

Published : Dec 9, 2021, 2:06 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) ಶೋಪಿಯಾನ್‌ನಲ್ಲಿ ಬುಧವಾರ ಪೊಲೀಸ್​ ಹಾಗೂ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಈ ಮೂವರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ (ಟಿಆರ್‌ಎಫ್) ಗೆ ಸೇರಿದ್ದು, ಈ ಹಿಂದೆ ದಾಳಿಗಳು ಮತ್ತು ನಾಗರಿಕ ದೌರ್ಜನ್ಯ ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಶೋಪಿಯಾನ್‌ನ ಚೋಳನ್ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆ ತಿಳಿದು ಪೊಲೀಸ್​ ಹಾಗೂ ಸಿಆರ್‌ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಶರಣಾಗುವಂತೆ ತಿಳಿಸಿದರೂ ಗುಂಡು ಹಾರಿಸಿದ ಹಿನ್ನೆಯಲ್ಲಿ ಎನ್​​ಕೌಂಟರ್​ ನಡೆಸಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರು ಸೋಪಿಯಾನ್​ ಮೂಲದವರೇ ಎಂದು ಗುರುತಿಸಲಾಗಿದ್ದು, ಎಲ್‌ಇಟಿ ಸಂಘಟನೆಗೆ ಸೇರಿಕೊಂಡಿದ್ದರು.

ಉಗ್ರರಿಂದ 01 ಎಕೆ 74 ರೈಫಲ್ ಮತ್ತು 02 ಪಿಸ್ತೂಲ್ ಸೇರಿದಂತೆ ಇತರ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಜಂಟಿ ತಂಡಗಳಿಗೆ ಕಾಶ್ಮೀರದ ಐಜಿಪಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸೇನಾ ದುರಂತಗಳು ಇದೇ ಮೊದಲಲ್ಲ..1993, 1997ರಲ್ಲಿ ನಡೆದಿದ್ದವು ಇಂಥದ್ದೇ ಅವಘಡಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.