ಹೈದರಾಬಾದ್: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾರಾಯಣಪೇಟ ಜಿಲ್ಲೆಯ ಮಾರಿಕಲ್ ಮಂಡಲ್ನ ಪೆಡ್ಡಕುಂಟ ಗ್ರಾಮದ ಮೂವರು ಸಾವಿಗೀಡಾಗಿದ್ದಾರೆ.
![ನರಸಿಂಹರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ](https://etvbharatimages.akamaized.net/etvbharat/prod-images/9703015_898_9703015_1606634935324.png)
ನರಸಿಂಹರೆಡ್ಡಿ, ಅವರ ಪತ್ನಿ ಲಕ್ಷ್ಮಿ, ಇವರ ಮಗ ಭರತ್ ರೆಡ್ಡಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗಳು ಮೌನಿಕಾ ರೆಡ್ಡಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನರಸಿಂಹ ರೆಡ್ಡಿ ಅವರು ಹೈದರಾಬಾದ್ನ ಡಿಪೋ -1ರಲ್ಲಿ ಆರ್‌ಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮಗ ಮತ್ತು ಮಗಳು ಅಮೆರಿಕದ ಟೆಕ್ಸಾಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸಿಗರೇಟ್ ಸೇದಲು ಬೆಂಕಿಪೊಟ್ಟಣ ಕೊಡದಿದ್ದಕ್ಕೆ ದಲಿತ ವ್ಯಕ್ತಿಯ ಥಳಿಸಿ ಕೊಲೆ
ಮೌನಿಕಾ ರೆಡ್ಡಿ ಅವರ ಮದುವೆಯ ಬಗ್ಗೆ ಮಾತನಾಡಲು ದಂಪತಿ ಆರು ತಿಂಗಳ ಹಿಂದೆ ಟೆಕ್ಸಾಸ್‌ಗೆ ಹೋಗಿದ್ದರು. ಟೆಕ್ಸಾಸ್‌ನಲ್ಲಿ ಸಂಬಂಧಿಕರೊಬ್ಬರ ಮನೆಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ.