ವಿರುಧುನಗರ : ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸತ್ತೂರು ಸಮೀಪದ ಮಂಜಲ್ ಒಡೆಯಪಟ್ಟಿಯಲ್ಲಿ ನಡೆದಿದೆ.
ಕರುಪ್ಪಸ್ವಾಮಿ ಎಂಬುವರಿಗೆ ಸೇರಿದ ಪಟಾಕಿ ಕಾರ್ಖಾನೆ ಇದಾಗಿದೆ. ಇದರಲ್ಲಿ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಕಾರ್ಖಾನೆಯ ಮಾಲೀಕ ಕರುಪ್ಪಸ್ವಾಮಿ ಮತ್ತು ಆತನ ಸಂಬಂಧಿ ಸೆಂಥಿಲ್ ಕುಮಾರ್ ಎಂಬುವರು ಪಟಾಕಿ ತಯಾರಿಸಲು ಕೆಮಿಕಲ್ಸ್ ಮಿಶ್ರಣ ಮಾಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ.
ಘಟನೆಯಲ್ಲಿ ಸೆಂಥಿಲ್ ಕುಮಾರ್ ಮತ್ತು ಅವರ ಸೋದರ ಸಂಬಂಧಿ ಕಾಸಿ ಹಾಗೂ ಪಟಾಕಿ ಫ್ಯಾಕ್ಟರಿ ಮಾಲೀಕ ಕರುಪ್ಪಸ್ವಾಮಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕೋವಿಲಪಟ್ಟಿ ಹಾಗೂ ಸತ್ತೂರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಕುರಿತು ವೆಂಪಕ್ಕೊಟ್ಟಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.