ಸಾಂಗ್ಲಿ(ಮಹಾರಾಷ್ಟ್ರ): ರಾಯಚೂರು ಮೂಲದ ಮೂವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೃತರೆಲ್ಲರೂ ಮಹಾರಾಷ್ಟ್ರದ ಮಂಗಳವೇಡ ತಾಲೂಕಿನಲ್ಲಿರುವ ಮಹಾಲಿಂಗರಾಯ ಯಾತ್ರೆಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಟೈರ್ ಫ್ಲಾಟ್(ಚಕ್ರ ಸವೆದು ಹೋಗುವುದು) ಆಗಿದ್ದ ಕಾರಣದಿಂದ ಕಾರು ಪಲ್ಟಿಯಾಗಿ ಡಿಂಡಿಯಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತರನ್ನು ಲಿಂಗಸೂರು ತಾಲೂಕಿನ ಬಸವರಾಜ ದುರ್ಗಪ್ಪ ಚಿಂಚವಾಡೆ, ನಾಗಪ್ಪರ ಸೋಮಣ್ಣ ಅಚ್ನಾಲ್ ಹಾಗೂ ಎಂ. ಹನಮಪ್ಪ ದುರ್ಗಪ್ಪ ಗೊಂಡಿಕಲ್ ಎಂದು ಗುರುತಿಸಲಾಗಿದೆ.
ದೀಪಾವಳಿಗೆ ಸೋಲಾಪುರ ಜಿಲ್ಲೆಯ ಮಂಗಳವೇಡದ ಹುಲ್ಜಂಟಿ ಎಂಬಲ್ಲಿ ಅದ್ದೂರಿಯಾಗಿ ನಡೆಯುವ ಮಹಾಲಿಂಗರಾಯ ಯಾತ್ರೆಗೆ ಅವರು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಆಳ ಕಂದಕಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ