ETV Bharat / bharat

ಲಷ್ಕರ್-ಎ-ತೊಯ್ಬಾದ ಮೂವರು 'ಹೈಬ್ರಿಡ್ ಉಗ್ರರ' ಬಂಧನ - ಎಲ್​​ಇಟಿ ಸಂಘಟನೆಯ ಹೈಬ್ರಿಡ್ ಉಗ್ರರ ಬಂಧನ

ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರು ಹೈಬ್ರಿಡ್​ ಉಗ್ರರನ್ನು ಸೊಪೋರ್​ನ ಹೈಗಾಮ್ ಪ್ರದೇಶದಲ್ಲಿ ಬಂಧಿಸಲಾಗಿದೆ.

Three Lashkar-e-Taiba Hybrid militants arrested in jammu kashmir
ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಹೈಬ್ರಿಡ್ ಉಗ್ರರ ಬಂಧನ
author img

By

Published : May 3, 2022, 6:31 AM IST

ಬಾರಾಮುಲ್ಲಾ(ಜಮ್ಮು ಕಾಶ್ಮೀರ): ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್‌ನ ಹೈಗಾಮ್ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಮೂವರು ಹೈಬ್ರಿಡ್ ಉಗ್ರರನ್ನು ಬಂಧಿಸಿರುವುದಾಗಿ ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಇತ್ತೀಚಿಗೆ ಸ್ಥಳೀಯರಲ್ಲದ ಜನರ ಹತ್ಯೆಗಳು ಮತ್ತು ವಿವಿಧೆಡೆ ನಡೆದ ಗ್ರೆನೇಡ್ ದಾಳಿಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಿಂದ ಶಂಕಿತರನ್ನು ಬಂಧಿಸಲಾಗಿದೆ.

ಸತತ ವಿಚಾರಣೆಯ ನಂತರ ಈ ಉಗ್ರರು ಲಷ್ಕರ್-ಎ-ತೊಯ್ಬಾದ ಸಂಘಟನೆಗೆ ಸೇರಿದವರು ಎಂದು ಗೊತ್ತಾಗಿದೆ. ಬಂಧಿತರಿಂದ ಮೂರು ಚೀನಾ ನಿರ್ಮಿತ ಪಿಸ್ತೂಲ್‌ಗಳು, ಮದ್ದುಗುಂಡುಗಳು ಹಾಗೂ ಇತರ ಅಪರಾಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೈಬ್ರಿಡ್ ಉಗ್ರರೆಂದರೆ ಯಾರು?: ಭಯೋತ್ಪಾದನಾ ಸಂಘಟನೆಗಳೊಂದಿಗೆ ಸೇರಿಕೊಂಡು ದಾಳಿ ನಡೆಸುವ, ಒಂದು ಅಥವಾ ಎರಡು ಬಾರಿ ದಾಳಿ ನಡೆಸಿ ಮರೆಯಾಗುವ ಹಾಗೂ ಭದ್ರತಾ ಪಡೆಗಳ ಬಳಿಯಿರುವ ಉಗ್ರರ ಪಟ್ಟಿಯಲ್ಲಿರದ ಉಗ್ರರನ್ನು ಹೈಬ್ರಿಡ್ ಉಗ್ರರು ಎಂದು ಕರೆಯಲಾಗುತ್ತದೆ. ಸ್ಥಳೀಯ ವ್ಯಕ್ತಿಯೇ ಒಮ್ಮೊಮ್ಮೆ ಹೈಬ್ರಿಡ್ ಉಗ್ರನಾಗಿ ಉಗ್ರ ಸಂಘಟನೆಯೊಂದರ ಪರ ಕಾರ್ಯನಿರ್ವಹಿಸುವ ಕಾರಣದಿಂದ 'ಹೈಬ್ರಿಡ್ ಭಯೋತ್ಪಾದನೆ' ಭದ್ರತಾ ಪಡೆಗಳಿಗೆ ಸವಾಲು ಕೂಡಾ ಹೌದು.

ಇದನ್ನೂ ಓದಿ: ನವಾಬ್​ ಮಲಿಕ್​ಗೆ ಮೂತ್ರಪಿಂಡ ಸಮಸ್ಯೆ, ಆಸ್ಪತ್ರೆಗೆ ದಾಖಲು.. ಮಧ್ಯಂತರ ಜಾಮೀನಿಗಾಗಿ ಕೋರ್ಟ್​ಗೆ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.