ETV Bharat / bharat

ರಸ್ತೆ ಅಪಘಾತದಲ್ಲಿ ಮೂವರು ಪತ್ರಕರ್ತರ ಸಾವು: 4 ಲಕ್ಷ ಪರಿಹಾರ ಘೋಷಿಸಿದ ಸಿಎಂ - ಹ ಪತ್ರಕರ್ತರಾದ ಸುನೀಲ್ ಶರ್ಮಾ ಮತ್ತು ನರೇಂದ್ರ ದೀಕ್ಷಿತ್

ಬೈಕ್​ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲೇ ಮೂವರು ಪತ್ರಕರ್ತರ ಸಾವು. ಸಾವಿಗೆ ಸಂತಾಪ ಸೂಚಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ.

Three journalists killed in road mishap in MP; CM Chouhan expresses grief
ರಸ್ತೆ ಅಪಘಾತದಲ್ಲಿ ಮೂವರು ಪತ್ರಕರ್ತರ ಸಾವು: 4ಲಕ್ಷ ಪರಿಹಾರ ಘೋಷಿಸಿದ ಮುಖ್ಯಮಂತ್ರಿ
author img

By

Published : Nov 29, 2022, 9:33 PM IST

ವಿದಿಶಾ(ಮಧ್ಯಪ್ರದೇಶ): ಭೋಪಾಲ್ - ವಿದಿಶಾ ರಸ್ತೆಯ ಲಂಬಖೇಡಾ ಬಳಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತಡರಾತ್ರಿ ವಿದಿಶಾ ಪ್ರೆಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶರ್ಮಾ ಮತ್ತು ಅವರ ಪತ್ರಕರ್ತ ಸಹೋದ್ಯೋಗಿಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಲಾಮತ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಪಘಾತಕ್ಕೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸರ್ಕಾರದ ಪರವಾಗಿ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

  • दिवंगत श्री राजेश शर्मा जी, श्री सुनील शर्मा जी और श्री नरेंद्र दीक्षित जी का परिवार स्वयं को अकेला न समझें, दुःख की इस घड़ी में हम सब शोकाकुल परिवार के साथ हैं।

    राज्य सरकार की ओर से मृतकों के परिजनों को 4-4 लाख रुपए सहायता राशि प्रदान की जायेगी।

    — Shivraj Singh Chouhan (@ChouhanShivraj) November 29, 2022 " class="align-text-top noRightClick twitterSection" data=" ">

ತನಿಖಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮೂವರು ವ್ಯಕ್ತಿಗಳು ಸೋಮವಾರ ರಾತ್ರಿ ಭೋಪಾಲ್‌ನಿಂದ ವಿದಿಶಾಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಲಂಬಖೇಡ ತಿರುವಿನಲ್ಲಿ ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದಿದ್ದೆ, ಬಿದ್ದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರೂ ವೃತ್ತಿಯಲ್ಲಿ ಪತ್ರಕರ್ತರಾಗಿದ್ದರು. ಅಪರಿಚಿತ ವಾಹನ ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ईश्वर से दिवंगत आत्माओं की शांति के लिए प्रार्थना करता हूं।

    ।। ॐ शांति ।।

ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವಿಟರ್‌ನಲ್ಲಿ, “ವಿದಿಶಾ ಪ್ರೆಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶರ್ಮಾ ಮತ್ತು ಸಹ ಪತ್ರಕರ್ತರಾದ ಸುನೀಲ್ ಶರ್ಮಾ ಮತ್ತು ನರೇಂದ್ರ ದೀಕ್ಷಿತ್ ಅಪಘಾತದಲ್ಲಿ ನಿಧನರಾದ ದುಃಖದ ಸುದ್ದಿಯನ್ನು ಕೇಳಿ ಆಘಾತವಾಯಿತು. ಅವರ ಕುಟುಂಬದ ಸದಸ್ಯರು ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ . ಓಂ ಶಾಂತಿ ಎಂದು ಟ್ವೀಟ್​ ಮಾಡಿದ್ದಾರೆ.

"ದಿವಂಗತ ರಾಜೇಶ್ ಶರ್ಮಾ, ಸುನೀಲ್ ಶರ್ಮಾ ಮತ್ತು ನರೇಂದ್ರ ದೀಕ್ಷಿತ್ ಅವರ ಕುಟುಂಬವು ತಮ್ಮನ್ನು ತಾವು ಒಂಟಿಯಾಗಿ ಪರಿಗಣಿಸಬಾರದು. ಈ ದುಃಖದ ಸಮಯದಲ್ಲಿ ನಾವೆಲ್ಲರೂ ದುಃಖತಪ್ತ ಕುಟುಂಬಗಳೊಂದಿಗೆ ಇದ್ದೇವೆ. ಸರ್ಕಾರದ ಪರವಾಗಿ ಮೃತರ ಕುಟುಂಬಗಳಿಗೆ ರೂ. ತಲಾ 4 ಲಕ್ಷ ಪರಿಹಾರ ಮೊತ್ತವನ್ನು ಘೋಷಿಸಿಲಾಗಿದೆ ’’ಎಂದು ಸಂತಾಪ ಸೂಚಿಸಿದರು.

ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ್, ನಗರಸಭೆ ಮಾಜಿ ಅಧ್ಯಕ್ಷ ಮುಖೇಶ್ ಟಂಡನ್ ಸಹ ಮಾಧ್ಯಮದವರೊಂದಿಗೆ ಮಾತನಾಡಿ, ಪತ್ರಕರ್ತರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​ ಸಭೆಗೇ ನುಗ್ಗಿದ ಗೂಳಿ.. ಬಿಜೆಪಿಯವರೇ ಕಳಿಸಿದ್ದಾರೆ ಎಂದ ರಾಜಸ್ಥಾನ ಮುಖ್ಯಮಂತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.