ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಈ ಮಹಾ ಮಳೆಗೆ ಉತ್ತರ ಪ್ರದೇಶದ ಮಹಿಳೆ ಮತ್ತು ಅವರ ಇಬ್ಬರು ಪುತ್ರರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ.
ಮೇಘಸ್ಫೋಟ ಸಂಭವಿಸಿದಾಗ ಮಹಿಳೆ ಮತ್ತು ಅವರ ಇಬ್ಬರು ಪುತ್ರರು ಅಸು ನೀಗಿದ್ದಾರೆ. ಬದ್ಗಾಂನ ಚಂದಾರಾದಲ್ಲಿ ಇಟ್ಟಿಗೆ ಗೂಡೊಂದರಲ್ಲಿ ಇವರೆಲ್ಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರೆಲ್ಲರೂ ಉತ್ತರ ಪ್ರದೇಶದ ಬರೇಲಿ ಮೂಲದವರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಇಂದು ಭಾರಿ ಪ್ರಮಾಣದ ಗಾಳಿ ಬೀಸಿದ್ದರಿಂದ ಮರಗಳು ಬೇರು ಸಮೇತ ಕಿತ್ತು ಮೇಲೆ ಬಂದಿವೆ. ಅನೇಕ ಪ್ರದೇಶಗಳಲ್ಲಿ ಮನೆಗಳ ಛಾವಣಿಗಳು ಹಾರಿಹೋಗಿವೆ. ಕಣಿವೆಯಾದ್ಯಂತ ಕನಿಷ್ಠ ಮೂರು ಡಜನ್ ಮನೆಗಳು ಗಾಳಿಯಿಂದಾಗಿ ಹಾನಿಗೊಳಗಾಗಿವೆ.
ಇದನ್ನು ಓದಿ: ಬಜೆಟ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ: ಅಧಿಕಾರಿಗಳಿಗೆ ಸಿಎಂ ವಾರ್ನಿಂಗ್