ಹಿಸಾರ್, ಹರಿಯಾಣ: ನಿಗೂಢ ಸಾವಿನ ಮೂರು ದಿನಗಳ ನಂತರ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಅಂತ್ಯ ಕ್ರಿಯೆ ನೆರವೇರಿದೆ.ಶುಕ್ರವಾರ ಹರಿಯಾಣದ ಅವರ ಹುಟ್ಟೂರಾದ ಹಿಸಾರ್‌ನಲ್ಲಿ ಅಂತಿಮ ವಿಧಿ ವಿಧಾನಗಳ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತಿಮ ನಮನ ಸಲ್ಲಿಸಲು ಆಗಮಿಸಿದ ಅಪಾರ ಸಂಖ್ಯೆಯ ಜನರು ಮತ್ತು ಮುಖಂಡರ ಉಪಸ್ಥಿತಿಯ ನಡುವೆ ಅವರ 16 ವರ್ಷದ ಮಗಳು ಯಶೋಧರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಪೂರೈಸಿದರು. ಬಳಿಕ ಗೋವಾದ ರೆಸಾರ್ಟ್‌ನಲ್ಲಿ ಸೋನಾಲಿ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು.
ಮರಣೋತ್ತರ ಪರೀಕ್ಷೆ ಬಳಿಕ ಸೋನಾಲಿ ಮೃತದೇಹವನ್ನು ಗೋವಾದಿಂದ ಹಿಸಾರ್‌ಗೆ ತಂದು ಸಿವಿಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಪಾರ್ಥಿವ ಶರೀರವನ್ನು ಜಿಲ್ಲಾ ಕೇಂದ್ರದಿಂದ ಧಂಧೂರ್ ಗ್ರಾಮದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಜನರಿಗೆ ಅಂತಿಮ ನಮನ ಸಲ್ಲಿಸಲು ಅನುವು ಮಾಡಿಕೊಡಲಾಯಿತು. ಅಂತಿಮ ಯಾತ್ರೆಯಲ್ಲಿ ತಾಯಿಯ ಶವಕ್ಕೆ ಮಗಳು ಹೆಗಲು ಕೊಟ್ಟರು. ಫೋಗಟ್ ತಮ್ಮ ವೃತ್ತಿಜೀವನವನ್ನು ಸುದ್ದಿ ನಿರೂಪಕರಾಗಿ ಪ್ರಾರಂಭಿಸಿದ್ದರು ಮತ್ತು ನಂತರ ವಿಡಿಯೋ ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಖ್ಯಾತಿ ಗಳಿಸಿದರು. ಕೆಲವು ಸಿನಿಮಾಗಳಲ್ಲೂ ಸಹ ಅವರು ನಟಿಸಿದ್ದರು.
ಅಂತ್ಯಕ್ರಿಯೆ ವೇಳೆ ಹರಿಯಾಣ ನಗರ ಸ್ಥಳೀಯ ಸಂಸ್ಥೆಗಳ ಸಚಿವ ಕಮಲ್ ಗುಪ್ತಾ, ಹಿಸಾರ್‌ನ ಬಿಜೆಪಿ ಶಾಸಕ ಕುಲದೀಪ್ ಬಿಷ್ಣೋಯ್, ಇತ್ತೀಚೆಗೆ ಬಿಜೆಪಿ ಸೇರಲು ಕಾಂಗ್ರೆಸ್ ತೊರೆದಿದ್ದ ಕುಲದೀಪ್ ಬಿಷ್ಣೋಯ್, ಹಿಸಾರ್ ಮೇಯರ್ ಗೌತಮ್ ಸರ್ದಾನ ಇತರರು ಉಪಸ್ಥಿತರಿದ್ದರು.
ಓದಿ: ಸೋನಾಲಿ ಫೋಗಟ್ ಸಾವಿಗೂ ಮುಂಚಿನ ಸಿಸಿಟಿವಿ ವಿಡಿಯೋ