ಫಿರೋಜ್ಪುರ(ಪಂಜಾಬ್): ಟಿಫಿನ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಲ್ಲದೇ ದುಷ್ಕೃತ್ಯಕ್ಕೆ ಸಂಗ್ರಹಿಟ್ಟಿದ್ದ ಸ್ಫೋಟಕವನ್ನೂ ಕೂಡ ವಶಕ್ಕೆ ಪಡೆದಿದ್ದಾರೆ.
ದೀಪಾವಳಿಗೂ ಮುನ್ನ ದಿನವಾದ ಮಂಗಳವಾರ ಫಿರೋಜ್ಪುರ ಜಿಲ್ಲೆಯ ಅಲಿ ಕೆ ಗ್ರಾಮದಲ್ಲಿ ಟಿಫಿನ್ ಬಾಂಬ್ ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಕಾರ್ಯಾಚರಣೆಗಿಳಿದ ಪೊಲೀಸರು ಮುಖ್ಯ ಆರೋಪಿ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪಂಜಾಬ್ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ, ಜಲಾಲಬಾದ್ ಸ್ಫೋಟ ಪ್ರಕರಣದ ಆರೋಪಿ ರಂಜಿತ್ ಸಿಂಗ್ ಆಲಿಯಾಸ್ ಗೋರಾಗೆ ಸಹಾಯ ಮಾಡಿದ ಆರೋಪದ ಮೇಲೆ ಲೂಧಿಯಾನ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಫಿರೋಜ್ಪುರದ ಜುಗ್ಗೆ ನಿಹಂಗನ್ ವಾಲಾ ಗ್ರಾಮದ ನಿವಾಸಿ ಜಸ್ವಂತ್ ಸಿಂಗ್ ಆಲಿಯಾಸ್ ಶಿಂದಾ ಬಾಬಾ ಮತ್ತು ಲೂಧಿಯಾನಾ ವಾಲಿಪುರ್ ಗ್ರಾಮದ ಖುರ್ದಾ ನಿವಾಸಿ ಬಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ. ಎನ್ಐಎ ಈ ಪ್ರಕರಣವನ್ನು ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.