ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಇಮೇಲ್ ಬಂದಿದೆ. ಮೋದಿ ಅವರನ್ನು ಹತ್ಯೆ ಮಾಡಲು 20 ಸ್ಲೀಪರ್ ಸೆಲ್‌ಗಳು ಸ್ಟ್ಯಾಂಡ್‌ಬೈನಲ್ಲಿವೆ ಹಾಗೆ 20 ಕೆಜಿ ಆರ್‌ಡಿಎಕ್ಸ್ ಸಿದ್ಧವಾಗಿದೆ ಎಂದು ಮೇಲ್‌ನಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.
ತಾನು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಸಂದೇಶ ಕಳುಹಿಸಿರುವ ಅನಾಮಿಕ ಹೇಳಿಕೊಂಡಿದ್ದಾನೆ. ಹತ್ಯೆಯ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ ಮತ್ತು ಆ ಕೆಲಸಕ್ಕಾಗಿ ಕಾಯುತ್ತಿದ್ದೇವೆ ಎಂದು ಇಮೇಲ್ನಲ್ಲಿ ಬರೆಯಲಾಗಿದೆ. ಇನ್ನು NIA ಇತರ ಭದ್ರತಾ ಏಜೆನ್ಸಿಗಳೊಂದಿಗೆ ಈ ಮೇಲ್ ಅನ್ನು ಹಂಚಿಕೊಂಡಿದೆ ಮತ್ತು IP ವಿಳಾಸವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.
ಮೆಲ್ನಲ್ಲಿ ಏನಿದೆ: ಎಲ್ಲರಿಗೂ ನಮಸ್ಕಾರ, ನನ್ನ ಬಳಿ 20 ಕ್ಕಿಂತ ಹೆಚ್ಚು RDX ಇದೆ, ಮತ್ತು ನಾನು 20 ದೊಡ್ಡ ದಾಳಿಗಳನ್ನು ಯೋಜಿಸಿದ್ದೇನೆ. ನಾನು ಮೋದಿಯನ್ನು ಸಾಧ್ಯವಾದಷ್ಟು ಬೇಗ ಕೊಲ್ಲಲು ಬಯಸುತ್ತೇನೆ, ನಾನು ಈ ಪ್ರಧಾನಿಗೆ ಬಾಂಬ್ ಸ್ಫೋಟಿಸುತ್ತೇನೆ. ಅವನು ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ನಾನು ಯಾರನ್ನೂ ಬಿಡುವುದಿಲ್ಲ.
ನಾನು 2 ಕೋಟಿ ಮಂದಿಯನ್ನ ಕೊಲ್ಲುತ್ತೇನೆ. ಈಗಾಗಲೇ ಕೆಲವು ಉಗ್ರರನ್ನ ಭೇಟಿ ಮಾಡಿದ್ದೇನೆ. ಅವರು ನನಗೆ ಆರ್‌ಡಿಎಕ್ಸ್ ಪಡೆಯಲು ಸಹಾಯ ಮಾಡಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದೂ ಈ ವಿಚಾರದಲ್ಲಿ ನನಗೆ ಖುಷಿ ಇದೆ. ನಾನು ಎಲ್ಲ ಕಡೆಯೂ ಬ್ಲಾಸ್ಟ್ ಮಾಡಿಯೇ ಮಾಡುತ್ತೇನೆ. ನೀವು ನನ್ನನ್ನ ತಡೆಯಬಹುದು, ಆದರೆ ಪ್ಲಾನ್ ಈಗಾಗಲೇ ರೆಡಿಯಾಗಿದೆ ಎಂದು ಬರೆಯಲಾಗಿದೆ.